ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದನೆ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯನ್ನು ಹೊಡೆದುಕೊಂದ ಗುಂಪು..!

ಲಾಹೋರ್: ಭೀಕರ ಘಟನೆಯೊಂದರಲ್ಲಿ, ಶುಕ್ರವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ದಾಳಿ ಮಾಡಿದ ಉಗ್ರಗಾಮಿ ಇಸ್ಲಾಮಿಸ್ಟ್ ಪಕ್ಷದ ಬೆಂಬಲಿಗರು ಶ್ರೀಲಂಕಾದ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಉನ್ನತ ಕಾರ್ಯನಿರ್ವಾಹಕರ ಮೇಲೆ ಹಲ್ಲೆ ನಡೆಸಿ ಅವರ ದೇಹವನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
40ರ ಹರೆಯದ ಪ್ರಿಯಾಂತ ಕುಮಾರ ಇಲ್ಲಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಸಿಯಾಲ್‌ಕೋಟ್ ಜಿಲ್ಲೆಯ ಗಾರ್ಮೆಂಟ್ಸ್‌ನಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಿಯಾಂತ ಕುಮಾರ ಅವರು ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ನ ಭಿತ್ತಿಪತ್ರವನ್ನು ಹರಿದು ಕುರಾನ್ ಪದ್ಯಗಳನ್ನು ಕೆತ್ತಿದ್ದರು ಮತ್ತು ಅದನ್ನು ಕಸದ ಬುಟ್ಟಿಗೆ ಎಸೆದಿದ್ದರು ಎಂದು ಆರೋಪದ ಮೇರೆಗೆ ಕುಮಾರ ಅವರನ್ನು ಹೊಡೆದು ನಂತರ ಸುಟ್ಟು ಹಾಕಲಾಗಿದೆ. ‌
ಪ್ರಿಯಾಂತ್ ಕಚೇರಿಗೆ ಹೊಂದಿಕೊಂಡಿರುವ ಗೋಡೆಯ ಮೇಲೆ ಇಸ್ಲಾಮಿಸ್ಟ್ ಪಕ್ಷದ ಪೋಸ್ಟರ್ ಅಂಟಿಸಲಾಗಿತ್ತು. ಒಂದೆರಡು ಕಾರ್ಖಾನೆಯ ಕಾರ್ಮಿಕರು ಪ್ರಿಯಾಂತ್‌ ಅವರು ಪೋಸ್ಟರ್ ತೆಗೆದದ್ದನ್ನು ನೋಡಿ ಕಾರ್ಖಾನೆಯಲ್ಲಿ ಸುದ್ದಿ ಹರಡಿದರು ಎಂದು ಅಧಿಕಾರಿ ಹೇಳಿದ್ದಾರೆ.
“ದೇವನಿಂದನೆ” ಘಟನೆಯ ಮೇಲೆ ಕೋಪಗೊಂಡ ನೂರಾರು ಜನರು ಪಕ್ಕದ ಪ್ರದೇಶಗಳಿಂದ ಕಾರ್ಖಾನೆಯ ಹೊರಗೆ ಸೇರಲು ಪ್ರಾರಂಭಿಸಿದರು. ಅವರಲ್ಲಿ ಹೆಚ್ಚಿನವರು ಟಿಎಲ್‌ಪಿಯ ಕಾರ್ಯಕರ್ತರು ಮತ್ತು ಬೆಂಬಲಿಗರಾಗಿದ್ದರು.
ಜನಸಮೂಹವು ಶಂಕಿತನನ್ನು (ಶ್ರೀಲಂಕಾದ ಪ್ರಜೆ) ಕಾರ್ಖಾನೆಯಿಂದ ಎಳೆದೊಯ್ದು ತೀವ್ರವಾಗಿ ಹಿಂಸಿಸಿತು. ಅವರು ಗಾಯಗಳಿಂದ ಸತ್ತ ನಂತರ ಪೊಲೀಸರು ಅಲ್ಲಿಗೆ ತಲುಪುವ ಮೊದಲು ಜನಸಮೂಹವು ಅವರ ದೇಹವನ್ನು ಸುಟ್ಟುಹಾಕಿತು ಎಂದು ಎಂದು ಅಧಿಕಾರಿ ಹೇಳಿದರು..
ಇತ್ತೀಚೆಗೆ ಪಾಕಿಸ್ತಾನಿ ಸರ್ಕಾರ ಟಿಎಲ್ ಪಿ ಜತೆಗಿನ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಬಳಿಕ ಅದರ ಮುಖ್ಯಸ್ಥ ಸಾದ್ ರಿಜ್ಜಿ ಸೇರಿದಂತೆ ಭಯೋತ್ಪಾದನೆ ಆರೋಪ ಹೊತ್ತ 1,500ಕ್ಕೂ ಹೆಚ್ಚು ಮಂದಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಹತ್ಯೆ ನಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಶ್ರೀಲಂಕಾ ಪ್ರಜೆ ಪ್ರಿಯಾಂತ್ ಹತ್ಯೆ ಬಳಿಕ ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸಿಯಾಲ್ಕೋಟ್ ಜಿಲ್ಲಾ ಪೊಲೀಸ್​ ಅಧಿಕಾರಿ ಉಮರ್​ ಸಯದ್​ ಮಲಿಕ್ ತಿಳಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement