ತಲ್ವಾರ್‌ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಮಂಗಳೂರು: ಶುಕ್ರವಾರ ಮಂಗಳೂರು ಹೊರವಲಯದ ಬಂಗ್ರಕುಳೂರಿನಲ್ಲಿ ಮಾರಾಕಾಯುಧಗಳನ್ನು ತೋರಿಸಿ ಮೂರು ದನಗಳನ್ನು ಕದ್ದಯೊಯ್ದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಕಾವೂರು ಪೊಲೀಸರು ಆರೊಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಉಳ್ಳಾಲದ ಮಹಮ್ಮದ್ ಸಲೀಂ (32). ಮಹಮದ್ ತಂಜಿಲ್(25), ಮಹಮದ್ ಇಕ್ಬಾಲ್( 23)ಎಂಬವರು ಬಂಧಿತ ಆರೋಪಿಗಳು.
ನಿನ್ನೆ ರಾತ್ರಿ ಬಂಗ್ರಕುಳೂರು ಬಳಿಯ ಮನೆಗಳ ದನದ ಕೊಟ್ಟಿಗೆಗೆ ನುಗ್ಗಿ ಮನೆಯವರಿಗೆ ತಲ್ವಾರ್‌ ತೋರಿಸಿ ಮೂರು ದನಗಳನ್ನು ಕಳವು ಮಾಡಿದ್ದರು. ಕಳುವಾದ ದನಗಳಲ್ಲಿ ಎರಡು ದನಗಳು ಉಮೇಶ್ ಮಲರಾಯಸಾನ ವರದ್ದು ಒಂದು ದನ ಉದಯ್​ ಶೆಟ್ಟಿ ಅವರದ್ದು ಎಂದು ತಿಳಿದುಬಂದಿದೆ.
ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ರಾತ್ರಿ ವೇಳೆ ಬಂದ ನಾಲ್ವರು ದುಷ್ಕರ್ಮಿಗಳು ತಲ್ವಾರ್ ತೋರಿಸಿ ಉಮೇಶ್​ ಹಾಗೂ ಉದಯ ಶೆಟ್ಟಿ ಅವರನ್ನು ಹೆದರಿಸಿ 3 ದನಗಳನ್ನು ಎಳೆದೊಯ್ದಿದ್ದರು. ದನಗಳನ್ನು ಕಳವು ಮಾಡಿದ್ದಲ್ಲದೆ ಅವುಗಳನ್ನು ಕೊಂದು ತಿಂದಿದ್ದಾರೆ ಎಂದು ಆರೋಪಿಲಾಗಿದೆ.ಈ ಕುರಿತು ಉಮೇಶ್​ ಮತ್ತು ಉದಯ್​ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳತನಕ್ಕೆ ಬಳಸಿದ್ದ ತಲ್ವಾರ್, ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement