ಭಾರತದಲ್ಲಿ ಮತ್ತೆರಡು ಓಮಿಕ್ರಾನ್‌ ಕೇಸ್‌ ಪತ್ತೆ, ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ನವದೆಹಲಿ: ಕೋವಿಡ್‌ ವಿಚಾರದಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸುವಂತೆ ಓಮಿಕ್ರಾನ್‌ ಪತ್ತೆಯಾಗಿರುವ ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಪತ್ರ ಬರೆದಿದೆ.
ಈ ರಾಜ್ಯಗಳಲ್ಲಿ ದೈನಂದಿನ ಸೋಂಕು ಮತ್ತು ಪಾಸಿಟಿವಿಟಿ ದರ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಚಿವಾಲಯ ಸೋಂಕು ಪತ್ತೆ, ಪರೀಕ್ಷೆ, ಲಸಿಕೆ ವೇಗ ತೀವ್ರಗೊಳಿಸಬೇಕು. ಜತೆಗೆ ಜಿನೋಮ್‌ ಸೀಕ್ವೆನ್ಸಿಂಗ್‌ ಹೆಚ್ಚಿಸಬೇಕು ಎಂದು ಸೂಚಿಸಿದೆ. ಕರ್ನಾಟಕ, ಕೇರಳ, ತ.ನಾಡು, ಒಡಿಶಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರಕ್ಕೆ ಪತ್ರ ಬರೆಯಲಾಗಿದೆ.
ದೇಶದಲ್ಲಿ’ಓಮಿಕ್ರಾನ್‌’ ವೈರಾಣುವಿನ ಸೋಂಕಿಗೆ ತುತ್ತಾದ ಎರಡು ಹೊಸ ಪ್ರಕರಣಗಳು ಶನಿವಾರ ವರದಿಯಾಗಿವೆ. ಒಂದು ಗುರಾತಿನ ಜಾಮ್‌ ನಗರದಲ್ಲಿ ವರದಿಯಾದರೆ ಮತ್ತೊಂದು ಮುಂಬೈನಲ್ಲಿ ವರದಿಯಾಗಿದೆ. ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿವೆ.
ಜಿಂಬಾಬ್ವೆಯಿಂದ ಮರಳಿರುವ ಗುಜರಾತ್‌ನ ಜಾಮ್‌ನಗರದ 72 ವರ್ಷದ ವೃದ್ಧ ಹಾಗೂ ದಕ್ಷಿಣ ಆಫ್ರಿಕಾದಿಂದ ಬಂದಿರುವ ಮುಂಬಯಿ ಡೊಂಬಿವಿಲಿಯ 33 ವರ್ಷದ ಯುವಕನಿಗೆ ರೂಪಾಂತರಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರೊಂದಿಗೆ ಕರ್ನಾಟಕದ ಎರಡು ಸೇರಿದಂತೆ ದೇಶದಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದೇಶದಲ್ಲಿ ಪತ್ತೆಯಾದಂತಾಗಿವೆ. ಈ ಪೈಕಿ ಮುಂಬಯಿಯ ಯುವಕ ಕೊರೊನಾ ನಿರೋಧಕ ಲಸಿಕೆಯ ಒಂದು ಡೋಸ್‌ ಸಹ ಪಡೆದಿರಲಿಲ್ಲ ಎನ್ನುವುದು ತಿಳಿದುಬಂದಿದೆ.
ಸೋಂಕಿತರಲ್ಲಿ ಸಣ್ಣ ಪ್ರಮಾಣದ ಜ್ವರ ಮಾತ್ರ ಕಾಣಿಸಿಕೊಂಡಿದ್ದು, ಗಂಭೀರ ಅನಾರೋಗ್ಯದ ಲಕ್ಷಣಗಳು ಗೋಚರಿಸಿಲ್ಲ. ಈ ನಡುವೆ,

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement