ಓಮಿಕ್ರಾನ್ ಗಂಭೀರ ಸ್ವರೂಪದ ಸೋಂಕು ಅಲ್ಲ: ತಮ್ಮ ಅನುಭವ ಹಂಚಿಕೊಂಡ ಮೊದಲ ಸೋಂಕಿತ ಬೆಂಗಳೂರಿನ ವೈದ್ಯರು

ಬೆಂಗಳೂರು: ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಜನರು ಆತಂಕ ಪಡಬೇಕಾಗಿಲ್ಲ ಎಂದು ಓಮಿಕ್ರಾನ್ ಸೋಂಕಿತ ಬೆಂಗಳೂರಿನ ವೈದ್ಯರು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭಾರತದ ಮೊದಲ ಇಬ್ಬರು ಓಮಿಕ್ರಾನ್ ಸೋಂಕಿತರಲ್ಲಿ ಒಬ್ಬರಾದ ಅವರು ಯಾವುದೇ ಪ್ರಯಾಣ ಇತಿಹಾಸ ಇಲ್ಲದ ಬೆಂಗಳೂರಿನ 46 ವರ್ಷದ ವೈದ್ಯರು ಈಗ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈವರೆಗೂ ತಮ್ಮಲ್ಲಿ ಯಾವುದೇ ರೀತಿಯ ಆತಂಕ ತರುವ ಅನುಭವ ಆಗಿಲ್ಲ ಎಂದು ಅವರನ್ನು ಉಲ್ಲೇಖಿಸಿ ಕೆಲ ಮಾಧ್ಯಮಗಳು ವರದಿ ಮಾಡಿವೆ..
ಸೋಂಕು ಬಂದಾಗಿನಿಂದ ಈವರೆಗೂ ನನಗೆ ಯಾವುದೇ ಸಮಸ್ಯೆ ಆಗಿಲ್ಲ. ಆ ಬಗ್ಗೆ ಆತಂಕವೂ ಇಲ್ಲ. ಓಮಿಕ್ರಾನ್ ತಗುಲಿದಾಗ ಆರಂಭದಲ್ಲಿ ಮೈ-ಕೈ ನೋವು ಕಾಣಿಸಿಕೊಂಡಿತ್ತು. ಈ ಲಕ್ಷಣ ಹೊರತುಪಡಿಸಿದರೇ ಬೇರೆ ಯಾವುದೇ ಸಮಸ್ಯೆ ನನಗೆ ಬಂದಿಲ್ಲ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ವೈರಸ್ ಹೇಗೆ ಬಂತು ಅಂತ ನನಗೆ ಗೊತ್ತಿಲ್ಲ. ನವೆಂಬರ್ 20ರಂದು ವೈದ್ಯರ ಸಮ್ಮೇಳನವೊಂದರಲ್ಲಿ ಭಾಗಿಯಾಗಿದ್ದೆ. ಅಲ್ಲಿ ಬೇರೆ ಬೇರೆ ಕಡೆಯಿಂದ ವೈದ್ಯರು ಬಂದಿದ್ದರು. ಆ ಬಳಿಕ ದೇಹದಲ್ಲಿ ಸ್ವಲ್ಪ ಏರುಪೇರು ಆಯಿತು. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. ಹೀಗಾಗಿ ಕೋವಿಡ್ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿತ್ತು. ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮೈ ಕೈ ನೋವು, ಶೀತ ಮತ್ತು ಸಣ್ಣನೆಯ ಜ್ವರ ತಮಗೆ ಉಂಟಾದ ಲಕ್ಷಣಗಳು. ಆದರೆ ಉಸಿರಾಟದ ಸಮಸ್ಯೆ ಉಂಟಾಗಲಿಲ್ಲ. ಚಿಕಿತ್ಸೆಯುದ್ದಕ್ಕೂ ಆಮ್ಲಜನಕ ಉಸಿರಾಟದ ಪ್ರಮಾಣ ಸಹಜ ಮಟ್ಟದಲ್ಲಿಯೇ ಇತ್ತು ಎಂದು ಅವರು ಹೇಳಿದ್ದಾರೆ.
ಹೊಸ ಕೊರೊನಾ ವೈರಸ್ ತಳಿ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ನನಗೆ ಮೊದಲು ರೋಗ ಲಕ್ಷಣಗಳು ಕಂಡುಬಂದಾಗ ಉದ್ವೇಗಕ್ಕೆ ಒಳಗಾಗಲಿಲ್ಲ. ಕೂಡಲೇ ಪರೀಕ್ಷೆಗೆ ಒಳಪಟ್ಟು. ಸ್ವಯಂ ಐಸೋಲೇಟ್ ಆಗಿ, ಚಿಕಿತ್ಸೆಗೆ ಒಳಗಾದರು. ಪತ್ನಿ ಹಾಗೂ ಮಕ್ಕಳು ಕೂಡ ಮನೆಯಲ್ಲಿ ಕ್ವಾರೆಂಟೈನ್ ಆಗಿದ್ದರು. ಓಮ್ರಿಕಾನ್‌ ಆರೋಗ್ಯದ ಮೇಲೆ ಗಂಭೀರ ಗಂಭೀರ ಪರಿಣಾಮ ಬೀರಿಲ್ಲ. ಆದರೆ ಓಮಿಕ್ರಾನ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ವೈದ್ಯರು ಮತ್ತು ಸರ್ಕಾರ ನೀಡುವ ಸಲಹೆ, ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement