ಪ್ರಥಮ, ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಸಮಯದಲ್ಲಿ ಬದಲಾವಣೆ

ಬೆಂಗಳೂರು: 2021-22 ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷಾ ಸಮಯದಲ್ಲಿ ಕೊಂಚ ಬದಲಾವಣೆ ಮಾಡಿದ್ದು, ಈ ಬಗ್ಗೆ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.
18-11-2021ರಲ್ಲಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ನಡೆಸುವ ಕುರಿತು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ ಈಗ ವೇಳಾಪಟ್ಟಿಯಲ್ಲಿ ಪರೀಕ್ಷೆ ಸಮಯವನ್ನು ಈ ಮೊದಲು ಬೆಳಗ್ಗಿನ ಪರೀಕ್ಷೆ ಅವಧಿಯನ್ನು ಬೆಳಿಗ್ಗೆ 9 ರಿಂದ 12.15ರ ವರಗೆ ಹಾಗೂ ಮಧ್ಯಾಹ್ನದ ಅವಧಿಯನ್ನು ಮಧ್ಯಾಹ್ನ 2ರಿಂದ ಸಂಜೆ 5.15ರ ತನಕ ನಿಗದಿ ಪಡಿಸಲಾಗಿತ್ತು, ಆದರೆ ಈಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿರುವುದರಿಂದ ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಪರೀಕ್ಷಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮೊದಲನೇ ಅವಧಿ ಬೆಳಗ್ಗಿನ ಪರೀಕ್ಷೆ 09.00ರಿಂದ 12.15ರ ಬದಲಿಗೆ 9.30ರಿಂದ 12.45ರ ವರೆಗೆ ನಡೆಯಲಿದೆ. ಉಳಿದಂತೆ, ಪರೀಕ್ಷೆ ದಿನಾಂಕಗಳಲ್ಲಿ ಹಾಗೂ ಮಧ್ಯಾಹ್ನದ ಪರೀಕೆ ಅವಧಿಯಲ್ಲಿ ಯಾವುದೇ ಬದಲಾವಣೇ ಇಲ್ಲ ಎಂದು ತಿಳಿಸಲಾಗಿದೆ.

ವಿದ್ಯಾರ್ಥಿಗಳು  ಪರೀಕ್ಷೆ ಸಂಬಂಧ ಹೆಚ್ಚಿನ ಹಾಗೂ ಕೊನೆಯ ಕ್ಷಣದ  ಮಾಹಿತಿಗಾಗಿ ಕಾಲೇಜು  ಅಥವಾ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ಇದರಿಂದ ಕೊನೆಯ ಕ್ಷಣದ ಬದಲಾವಣೆಗಳಾಗಿದ್ದರೆ ಮಾಹಿತಿ ತಿಳಿಯುತ್ತದೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

4.2 / 5. 23

2 Responses

ನಿಮ್ಮ ಕಾಮೆಂಟ್ ಬರೆಯಿರಿ

advertisement