ಭಾರತ-ರಷ್ಯಾ ಮಿಲಿಟರಿ ಸಹಕಾರ: 10 ವರ್ಷಗಳ ಒಪ್ಪಂದ ನವೀಕರಣ

ನವದೆಹಲಿ: ಮಿಲಿಟರಿ-ತಾಂತ್ರಿಕ ಸಹಕಾರ ವ್ಯವಸ್ಥೆಯಡಿ 2021ರಿಂದ 2031ರ ವರೆಗೆ ಭಾರತ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ 6,01,427 ಅಸಾಲ್ಟ್ ರೈಫಲ್ಸ್ ಎಕೆ-203 ಖರೀದಿ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ.
ಭಾರತ ಮತ್ತು ರಷ್ಯಾ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಸಹಕಾರವನ್ನು ಒಳಗೊಂಡ ಹಲವಾರು ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳಿಗೆ ಸಹಿ ಹಾಕಿವೆ ಎಂದು ರಕ್ಷಣಾ ಸಚಿವ
ರಾಜನಾಥ್ ಸಿಂಗ್ ಸೋಮವಾರ ರಷ್ಯಾ ರಕ್ಷಣಾ ಸಚಿವ ಸರ್ಗೆ ಶೋಯಿಗು ಅವರನ್ನು ಭೇಟಿಯಾದ ನಂತರ ತಿಳಿಸಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿರುವ ರಾಜನಾಥ್ ಸಿಂಗ್ ಅವರು, ರಕ್ಷಣಾ ಸಹಕಾರವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಸಹಕಾರಕ್ಕೆ ಸಂಬಂಧಿಸಿದಂತೆ ಹಲವಾರು ಒಪ್ಪಂದಗಳು/ ಪ್ರೋಟೋಕಾಲ್‌ಗಳಿಗೆ ಸಹಿ ಹಾಕಿರುವುದು ಸಂತೋಷ ತಂದಿದೆ ಎಂದು ರಾಜನಾಥ್ ಸಿಂಗ್ ಎಂದು ಟ್ವೀಟ್ ಮಾಡಿದ್ದಾರೆ.
ಶೋಯಿಗು ಅವರೊಂದಿಗಿನ ಮಾತುಕತೆ ‘ಉತ್ಪಾದಕ, ಫಲಪ್ರದ ಮತ್ತು ಗಣನೀಯ” ಎಂದು ಹೇಳಿರುವ ರಾಜನಾಥ್ ಸಿಂಗ್, ‘ಭಾರತವು ರಷ್ಯಾದೊಂದಿಗೆ ತನ್ನ ವಿಶೇಷ ಮತ್ತು ವಿಶಿಷ್ಠ ಕಾರ್ಯತಂತ್ರದ ಪಾಲುದಾರಿಕೆಯನ್ನು ಗೌರವಿಸುತ್ತದೆ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement