ಕ್ರಿಕೆಟ್‌: ವೈಡ್‌ ಬಾಲ್‌ಗೆ ತಲೆಕೆಳಗಾಗಿ ನಿಂತ ಅಂಪೈರ್‌.. ವಿಡಿಯೊ ಈಗ ಸೂಪರ್‌ ವೈರಲ್…!..ವೀಕ್ಷಿಸಿ

ಅಂಪೈರ್‌ನ ಕೆಲಸವು ಅನೇಕ ಸವಾಲುಗಳೊಂದಿಗೆ ಕೂಡಿರುತ್ತದೆ. ಆದಾಗ್ಯೂ, ಅಂಪೈರ್‌ಗಳು ತಮ್ಮ ಆನ್‌ಫೀಲ್ಡ್ ಆಟಗಾರರ ಗಮನ ಸೆಳೆಯುವುದು ಅಪರೂಪ.
ಆದರೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಟೂರ್ನಿಯ ಪುರಂದರ ಪ್ರೀಮಿಯರ್ ಲೀಗ್‌ನಲ್ಲಿ ಅಂಪೈರ್ ವೈಡ್ ಬಾಲ್ ಸೂಚಿಸಲು, ಅಂಪೈರ್ ಯೋಗ ಭಂಗಿ ಪ್ರದರ್ಶಿಸಿದ ದೃಶ್ಯದ ವಿಡಿಯೋ ಈಗ ವೈರಲ್‌ ಆಗಿದೆ.
ವೈಡ್ ಬಾಲ್ ಅನ್ನು ಸೂಚಿಸಲು, ಅಂಪೈರ್‌ ಕ್ಯಾಮೆರಾದ ಹತ್ತಿರ ಬಂದು ತಲೆಕೆಳಗಾಗಿ ಕಾಲುಗಳನ್ನು ಮೇಲಕ್ಕೆತ್ತಿ ಕೈಗಳಂತೆ ಎರಡೂ ಕಾಲುಗಳನ್ನು ಅಗಲಿಸಿ ವೈಡ್‌ ಎಂದು ಸಿಗ್ನಲ್‌ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.
ಅಂಪೈರ್‌ನ ವರ್ತನೆಯಿಂದ ಕಾಮೆಂಟೇಟರ್ ಕೂಡ ಆಘಾತಕ್ಕೊಳಗಾಗಿದ್ದಾರೆ. “ಅಂಪೈರ್ ನಮ್ಮ ಹತ್ತಿರ ಬರುತ್ತಿದ್ದಾರೆ. ಅವನು ಏನು ಮಾಡಿದ್ದಾರೆ? ಅವರದೇ ಶೈಲಿಯಲ್ಲಿ ಅದ್ಭುತವಾಗಿಯೂ ನಟಿಸುತ್ತಿದ್ದಾರೆ’ ಎಂದು ಕಾಮೆಂಟೇಟರ್ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.
ಡಿಸೆಂಬರ್ 5 ರಂದು ಕ್ರಿಕೆಟ್ ಅಭಿಮಾನಿ ಸಾರಂಗ್ ಭಲೇರಾವ್ ಅವರು ಪೋಸ್ಟ್ ಮಾಡಿದ ವೀಡಿಯೊವನ್ನು 10 ಲಕ್ಷ ವೀಕ್ಷಣೆಗಳನ್ನು ಕಂಡಿದೆ. ಸಾರಂಗ್‌ ಅವರು “ಇಲ್ಲಿ ಅಂಪೈರ್ ಸೂಪರ್ ಸ್ಟಾರ್” ಎಂದು ಬರೆದಿದ್ದಾರೆ.‌

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement