ಪಾಕಿಸ್ತಾನ: ಅಂಗಡಿ ಕಳ್ಳತನ ಆರೋಪದ ಮೇಲೆ ನಾಲ್ವರು ಮಹಿಳೆಯರ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಥಳಿಸಿದ ಗುಂಪು..!

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ “ಅಂಗಡಿ ಕಳ್ಳತನದ ಆರೋಪದ ಮೇರೆಗೆ ಹದಿಹರೆಯದ ಹುಡುಗಿ ಸೇರಿದಂತೆ ನಾಲ್ವರು ಮಹಿಳೆಯರನ್ನು ಪಾಕಿಸ್ತಾನದ ಜನರ ಗುಂಪೊಂದು ಎಳೆದಾಡಿ ಥಳಿಸಿ ನಂತರ ಬೆತ್ತಲೆಯಾಗಿ ಅವರನ್ನು ಮೆರವಣಿಗೆ ಮಾಡಿದ ಘಟನೆ ನಡೆದಿದೆ.
ಲಾಹೋರಿನಿಂದ 180 ಕಿಮೀ ದೂರದಲ್ಲಿರುವ ಫೈಸಲಾಬಾದ್‌ನಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಹದಿಹರೆಯದದವಳು ಸೇರಿದಂತೆ ನಾಲ್ವರು ಮಹಿಳೆಯರು ತಮ್ಮ ಸುತ್ತಲಿನ ಜನರ ಮುಂದೆ ವಿವಸ್ತ್ರಗೊಳಿಸಲಾಯಿತು. ನಂತರ ಅವರು ತಮ್ಮನ್ನು ಮುಚ್ಚಿಕೊಳ್ಳಲು ಬಟ್ಟೆಯ ತುಂಡನ್ನು ನೀಡುವಂತೆ ಮನವಿ ಮಾಡುತ್ತಿರುವುದು ವೈರಲ್ ವಿಡಿಯೊದಲ್ಲಿ ಕಂಡುಬಂದಿದೆ. ಆದರೆ ಅವವರಿಗೆ ಬಟ್ಟೆಗಳನ್ನು ಕೊಡುವುದರ ಬದಲು ದೊಣ್ಣೆಗಳಿಂದ ಥಳಿಸಲಾಗಿದೆ.
ಮಹಿಳೆಯರು ತಮ್ಮನ್ನು ಹೋಗಲು ಬಿಡುವಂತೆ ಜನರಲ್ಲಿ ಅಳುತ್ತಾ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಒಂದು ಗಂಟೆ ಕಾಲ ಅವರನ್ನು ಬೀದಿಗಳಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು.
ಘಟನೆಯ ಒಂದೆರಡು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪಂಜಾಬ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.”ಈ ದುರದೃಷ್ಟಕರ ಘಟನೆಗೆ ಸಂಬಂಧಿಸಿದಂತೆ ನಾವು ಐದು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಪಂಜಾಬ್ ಪೊಲೀಸ್ ವಕ್ತಾರರು ಮಂಗಳವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದರಲ್ಲಿ ಭಾಗಿಯಾದ ಎಲ್ಲರಿಗೂ ನ್ಯಾಯ ದೊರಕಿಸಿಕೊಡಲಾಗುವುದು ಎಂದರು.
ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಐವರು ಶಂಕಿತರು ಮತ್ತು ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪ್ರಕರಣದ ಪ್ರಕಾರ, ಫೈಸಲಾಬಾದ್‌ನ ಬಾವಾ ಚಾಕ್ ಮಾರುಕಟ್ಟೆಗೆ ತ್ಯಾಜ್ಯ ಸಂಗ್ರಹಿಸಲು ಹೋಗಿದ್ದೆವು ಎಂದು ನಾಲ್ವರು ಮಹಿಳೆಯರು ಹೇಳಿದ್ದಾರೆ.
ನಾವು ಬಾಯಾರಿಕೆಯಿಂದ ಉಸ್ಮಾನ್ ಎಲೆಕ್ಟ್ರಿಕ್ ಅಂಗಡಿಯೊಳಗೆ ಹೋಗಿ ನೀರಿನ ಬಾಟಲಿಯನ್ನು ಕೇಳಿದೆವು. ಆದರೆ ನಾವು ಕಳ್ಳತನ ಮಾಡುವ ಉದ್ದೇಶದಿಂದ ಅಂಗಡಿಗೆ ಪ್ರವೇಶಿಸಿದ್ದೇವೆ ಎಂದು ಅದರ ಮಾಲೀಕ ಸದ್ದಾಂ ಆರೋಪಿಸಿದ್ದಾರೆ. ಸದ್ದಾಂ ಮತ್ತು ಇತರರು ನಮ್ಮನ್ನು ಹೊಡೆಯಲು ಪ್ರಾರಂಭಿಸಿದರು. ನಂತರ ಅವರು ನಮ್ಮನ್ನು ಮಾರುಕಟ್ಟೆಯ ಸ್ಥಳದಲ್ಲಿ ವಿವಸ್ತ್ರಗೊಳಿಸಿ, ಎಳೆದೊಯ್ದು ಥಳಿಸಿದರು. ನಮ್ಮನ್ನು ಬಟ್ಟೆ ಬಿಚ್ಚಿದ ನಂತರ ನಮ್ಮ ವಿಡಿಯೋಗಳನ್ನೂ ಮಾಡಿದ್ದಾರೆ… ಈ ದುಷ್ಕೃತ್ಯವನ್ನು ತಡೆಯಲು ಗುಂಪಿನಲ್ಲಿದ್ದ ಯಾರೂ ಪ್ರಯತ್ನಿಸಲಿಲ್ಲ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ದಾಳಿ ನಡೆಸಲಾಗಿದ್ದು, ಸದ್ದಾಂ ಸೇರಿದಂತೆ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಫೈಸಲಾಬಾದ್ ಪೊಲೀಸ್ ಮುಖ್ಯಸ್ಥ ಡಾ.ಅಬಿದ್ ಖಾನ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement