ರೈತ ಸಂಘಟನೆಗಳೊಂದಿಗೆ ಮಾತುಕತೆಯಲ್ಲಿ ಪರಿಹಾರದ ಭರವಸೆ ಇದೆ ಎಂದ ಸಂಯುಕ್ತ ಕಿಸಾನ್ ಮೋರ್ಚಾ

ನವದೆಹಲಿ: ಪ್ರತಿಭಟನಾ ನಿರತ ರೈತರ ಬಾಕಿ ಇರುವ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಸಂವಾದಕ್ಕಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಚಿಸಿರುವ ಐದು ಸದಸ್ಯರ ಸಮಿತಿಯು ಕೇಂದ್ರದಿಂದ ಹೊಸ ಕರಡು ಪ್ರಸ್ತಾವನೆಯನ್ನು ಸ್ವೀಕರಿಸಿದೆ ಮತ್ತು ನಿರ್ಣಯದ ಭರವಸೆ ಇದೆ ಎಂದು ಬುಧವಾರ ಹೇಳಿದೆ.
ಸರ್ಕಾರದ ಹೊಸ ಪ್ರಸ್ತಾವನೆಯನ್ನು ಚರ್ಚಿಸಲು ಸಮಿತಿಯು ರಾಷ್ಟ್ರ ರಾಜಧಾನಿಯಲ್ಲಿ ಸಭೆ ನಡೆಸಿತು.ಸಮಿತಿಯ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಯುಧ್ವೀರ್ ಸಿಂಗ್, ಕೇಂದ್ರದಿಂದ ಬಂದಿರುವ ಹೊಸ ಪ್ರಸ್ತಾವನೆಯನ್ನು ಚರ್ಚಿಸಲಾಗಿದೆ ಎಂದು ಹೇಳಿದರು.
ಇಂದು, ಐದು ಸದಸ್ಯರ ಸಮಿತಿಯು ಸಭೆ ನಡೆಸಿತು. ಇದು ನಿನ್ನೆಯ ಸಭೆಯ ಮುಂದುವರಿಕೆಯಾಗಿದೆ. ನಾವು ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ. ಇಂದು ನಾವು ಸರ್ಕಾರದಿಂದ ಪರಿಷ್ಕೃತ ಕರಡನ್ನು ಸ್ವೀಕರಿಸಿದ್ದೇವೆ. ನಾವು ಹೊಸ ಪ್ರಸ್ತಾಪವನ್ನು ಚರ್ಚಿಸಿದ್ದೇವೆ” ಎಂದು ಸಿಂಗ್ ಹೇಳಿದರು.
ಸರ್ಕಾರವು ಹೊಸ ಪ್ರಸ್ತಾವನೆಯನ್ನಿಟ್ಟಿರುವ ಅಂಗವಾಗಿ ಪ್ರತಿಭಟನಾ ನಿರತ ರೈತರು ಪ್ರತಿಭಟನೆ ಕೊನೆಗೊಳಿಸಬೇಕೇ ಎನ್ನುವ ಕುರಿತು ನಿರ್ಧರಿಸಲು ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ನಿರ್ಣಾಯಕ ಸಭೆ ನಡೆಸಿತ್ತು.
ರೈತರ ಮೇಲಿನ ನಕಲಿ ಪ್ರಕರಣಗಳನ್ನು ಹಿಂಪಡೆಯಲು ಪ್ರಸ್ತಾವನೆಯಲ್ಲಿ ನಿಗದಿಪಡಿಸಿರುವ ಪೂರ್ವಭಾವಿ ಷರತ್ತು ಸೇರಿದಂತೆ ಸರ್ಕಾರದ ಹೊಸ ಪ್ರಸ್ತಾವನೆಯಲ್ಲಿರುವ ಅಂಶಗಳ ಕುರಿತು ಸ್ಪಷ್ಟನೆ ನೀಡುವಂತೆ ಮಂಗಳವಾರವಷ್ಟೇ ಎಸ್‌ಕೆಎಂ ಒತ್ತಾಯಿಸಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಅಯೋಧ್ಯೆಯಲ್ಲಿ ರಾಮನವಮಿ ದಿನ ಬಾಲರಾಮನ ಹಣೆಗೆ ʼಸೂರ್ಯ ರಶ್ಮಿಯ ತಿಲಕ ʼ ; ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement