ಬಿಪಿನ್‌ ರಾವತ್‌ ನಿಧನದಿಂದ ದೇಶವು ಮಹಾನ್‌ ರಕ್ಷಣಾ ನೀತಿಜ್ಞ, ಅಪ್ರತಿಮ ದೇಶಭಕ್ತ- ಸಮರ್ಥ ನಾಯಕನನ್ನು ಕಳೆದುಕೊಂಡಿದೆ: ದತ್ತಾತ್ರೇಯ ಹೊಸಬಾಳೆ

ಬೆಂಗಳೂರು: ಹೆಲಿಕಾಪ್ಟರ್‌ ಅಪಘಾತದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಮೃತಪಟ್ಟಿದ್ದು ಅತ್ಯಂತ ದುಃಖಕರ ವಿಷಯ. ಅವರ ನಿಧನದಿಂದ ದೇಶವು ಮಹಾನ್‌ ರಣನೀತಿಜ್ಞ, ರಕ್ಷಣಾ ತಂತ್ರಜ್ಞ, ಅಪ್ರತಿಮ ದೇಶಭಕ್ತ ಹಾಗೂ ಸಮರ್ಥ ನಾಯಕರೊಬ್ಬರನ್ನು ಕಳೆದುಕೊಂಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕಂಬನಿ ಮಿಡಿದಿದ್ದಾರೆ.
ಬಿಪಿನ್‌ ರಾವತ್‌ ಅವರ ಮಾರ್ಗದರ್ಶನದಲ್ಲಿ ಭಾರತೀಯ ಸೇನೆಯು ಪರಾಕ್ರಮದ ಹೊಸ ಮಾದರಿಗಳನ್ನು ನಿರ್ಮಿಸಿತು. ಜನರಲ್‌ ಬಿಪಿನ್‌ ರಾವತ್‌ ಅವರು ದೇಶಭಕ್ತಿಯ ಕರ್ತವ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ಮಾದರಿಯಾಗಿ ಮುನ್ನಡೆಸಿದರು. ಐಎಂಎಯಲ್ಲಿ ಸ್ವೋರ್ಡ್‌ ಆಫ್‌ ಆನರ್‌ನಿಂದ ಹಿಡಿದು ದೇಶದ ಮೊದಲ ಸಿಡಿಎಸ್‌ ಆಗಿ ನೇಮಕಗೊಳ್ಳುವ ವರೆಗೆ ಅವರು ರಾಷ್ಟ್ರಕ್ಕೆ ಮಾಡಿದ ಆದರ್ಶಪ್ರಾಯ ಸೇವೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅವರ ದುರಂತ ಮರಣದ ಶೋಕದಲ್ಲಿ ರಾಷ್ಟ್ರದೊಡನೆ ನಾನೂ ಕೂಡ ಭಾಗಿಯಾಗುತ್ತೇನೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬಿಪಿನ್‌ ರಾವತ್‌ ಅವರಿಗೆ, ಅವರ ಪತ್ನಿಯವರಿಗೆ ಹಾಗೂ ಮೃತಪಟ್ಟ ಸೈನ್ಯದ ಎಲ್ಲ ಅಧಿಕಾರಿಗಳಿಗೂ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಮ್ಮ ಹೇಳಿದ್ದಾರೆ

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement