ಜನ ಬಯಸಿದ್ದನ್ನು ತಿನ್ನುವುದು ತಡೆಯಬೇಡಿ :ಅಹಮದಾಬಾದ್ ನಗರ ಪಾಲಿಕೆಗೆ ಹೈಕೋರ್ಟ್ ತಾಕೀತು

ಅಹಮದಾಬಾದ್ : ನಗರದಲ್ಲಿ ಮಾಂಸಾಹಾರ ಮಾರಾಟ ಮಾಡುವ ಮಳಿಗೆಗಳನ್ನು ವಶಪಡಿಸಿಕೊಂಡ ಅಹಮದಾಬಾದ್ ನಗರ ಪಾಲಿಕೆಯನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಮಾಂಸಾಹಾರ ಮಾರಾಟಕ್ಕೆ ಕೌನ್ಸಿಲರ್‌ಗಳಿಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಗಾಡಿಗಳನ್ನು ವಶಪಡಿಸಿಕೊಂಡಿದೆ ಎಂದು 25 ಬೀದಿ ವ್ಯಾಪಾರಿಗಳ ಮನವಿಯನ್ನು ಆಲಿಸಿದ ಗುಜರಾತ್ ಹೈಕೋರ್ಟ್ ಅಹಮದಾಬಾದ್ ನಗರ ಪಾಲಿಕೆ(ಎಎಂಸಿ) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಶಪಡಿಸಿಕೊಳ್ಳಲಾದ ಗಾಡಿಗಳನ್ನು 24 ಗಂಟೆಗಳೊಳಗೆ ಬಿಟ್ಟಕೊಡಬೇಕು ಎಂದು ನಿರ್ದೇಶಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಬಿರೇನ್ ವೈಷ್ಣವ್ ನಗರ ಸಭೆಗೆ ಏನು ತೊಂದರೆಯಾಗಿದೆ. ನಿಮ್ಮ ಸಮಸ್ಯೆ ಏನು? ನೀವು ಮಾಂಸಾಹಾರ ಇಷ್ಟಪಡುವುದಿಲ್ಲ, ಅದು ನಿಮಗೆ ಸಂಬಂಧಿಸಿದ್ದು, ನಾನು ಹೊರಗೆ ಏನು ತಿನ್ನಬೇಕು ಎಂಬುದನ್ನು ನೀವು ನಿರ್ಧರಿಸುವುದು ಹೇಗೆ? ನಾಳೆ ನೀವು ಮನೆಯ ಹೊರಗೆ ನಾನು ಏನು ತಿನ್ನಬೇಕು ಎಂಬುದನ್ನು ನಿರ್ಧರಿಸುವಿರಾ ಎಂದು ಪ್ರಶ್ನಿಸಿದರು.
ನಿರ್ದಿಷ್ಟ ಪದಾರ್ಥಗಳ ವಿರುದ್ಧ ಆಡಳಿತಾರೂಢ ಪಕ್ಷಗಳು ನಿರ್ಣಯ ಕೈಗೊಂಡಿವೆ ಎಂಬ ಕಾರಣಕ್ಕೆ ವ್ಯಾಪಾರಿಗಳಿಗೆ ತೊಂದರೆಯಾಗುವ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸ್ಥಳೀಯ ಆಡಳಿತಕ್ಕೆ ಕೋರ್ಟ್ ತಾಕೀತು ಮಾಡಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement