ಜನ ಬಯಸಿದ್ದನ್ನು ತಿನ್ನುವುದು ತಡೆಯಬೇಡಿ :ಅಹಮದಾಬಾದ್ ನಗರ ಪಾಲಿಕೆಗೆ ಹೈಕೋರ್ಟ್ ತಾಕೀತು
ಅಹಮದಾಬಾದ್ : ನಗರದಲ್ಲಿ ಮಾಂಸಾಹಾರ ಮಾರಾಟ ಮಾಡುವ ಮಳಿಗೆಗಳನ್ನು ವಶಪಡಿಸಿಕೊಂಡ ಅಹಮದಾಬಾದ್ ನಗರ ಪಾಲಿಕೆಯನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಾಂಸಾಹಾರ ಮಾರಾಟಕ್ಕೆ ಕೌನ್ಸಿಲರ್‌ಗಳಿಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಗಾಡಿಗಳನ್ನು ವಶಪಡಿಸಿಕೊಂಡಿದೆ ಎಂದು 25 ಬೀದಿ ವ್ಯಾಪಾರಿಗಳ ಮನವಿಯನ್ನು ಆಲಿಸಿದ ಗುಜರಾತ್ ಹೈಕೋರ್ಟ್ ಅಹಮದಾಬಾದ್ ನಗರ ಪಾಲಿಕೆ(ಎಎಂಸಿ) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. … Continued