ನಿಷೇಧದ ಹೊರತಾಗಿಯೂ‌ ಪುಟ್ಟ ಮಕ್ಕಳ ಮದುವೆಯ ಶಾಕಿಂಗ್ ವಿಡಿಯೊ ವೈರಲ್ | ವೀಕ್ಷಿಸಿ

ಜೈಪುರ: ಭಾರತದಲ್ಲಿ ಬಾಲ್ಯವಿವಾಹವನ್ನು ನಿಷೇಧಿಸಿ 92 ವರ್ಷಗಳು ಕಳೆದಿವೆ, ಆದರೆ ಪ್ರತಿಗಾಮಿ ಮತ್ತು ಅನಿಷ್ಠ ಸಂಪ್ರದಾಯವು ಇನ್ನೂ ದೇಶದಲ್ಲಿ ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಆಚರಣೆಯಲ್ಲಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕಾನೂನು ಪ್ರಕಾರ, ಮದುವೆಯಾಗಲು ಹುಡುಗಿಗೆ 18 ವರ್ಷ ಮತ್ತು ಹುಡುಗನಿಗೆ 21 ವರ್ಷ ಆಗಿರಬೇಕು. ಆದರೆ ಮುಗ್ಧ ಮಕ್ಕಳನ್ನು ಅವರ ಕುಟುಂಬಗಳು ಇನ್ನೂ ಬಾಲ್ಯದಲ್ಲೇ ಮದುವೆಗೆ ಒತ್ತಾಯಿಸುತ್ತಿವೆ. ಇಮಥದ್ದೇ ಒಂದು ಘಟನೆಯಲ್ಲಿ ರಾಜಸ್ಥಾನದ ಭಿಲ್ವಾರಾದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದು ತೋರಿಸುವ ವಿಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.
ಆಜ್ ತಕ್ ಮಾಡಿರುವ ವರದಿ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ರಾಜಸ್ಥಾನದಿಂದ ಮೂರು ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಡಿಸೆಂಬರ್ 7ರಂದು ರಾಜಸ್ಥಾನದ ಭಿಲ್ವಾರಾ ಪ್ರದೇಶದ ಕೋಡಿ ಶ್ಯಾಮ್ ದೇವಸ್ಥಾನದಲ್ಲಿ ಎರಡು ಬಾಲ್ಯ ವಿವಾಹಗಳು ನಡೆದಿದ್ದು, ಇನ್ನೊಂದನ್ನು ಜಿಲ್ಲಾಡಳಿತವು ನಿಲ್ಲಿಸಿದೆ. ಆ ನಾಲ್ವರು ಮಕ್ಕಳೂ 10ರಿಂದ 12 ವರ್ಷ ವಯಸ್ಸಿನವರು ಎಂದು ವರದಿಯಾಗಿದೆ.

ವಿಡಿಯೊ ಕ್ಲಿಪ್‌ನಲ್ಲಿ, ಮಕ್ಕಳು ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಇರುವುದನ್ನು ಕಾಣಬಹುದು, ಈ ಮದುವೆ ಧಿರಿಸಿನಲ್ಲಿರುವ ಮಕ್ಕಳನ್ನು ಜನರ ಗುಂಪು ಸುತ್ತುವರಿದಿದೆ. ತಮ್ಮ ಸುತ್ತಲೂ ಏನಾಗುತ್ತಿದೆ ಎಂದು ತಿಳಿಯದೆ, ಮಕ್ಕಳು ನಗುತ್ತಾ ಪರಸ್ಪರ ಜಗಳವಾಡುತ್ತ ಇದು ಒಂದು ರೀತಿಯ ಆಟ ಎಂದು ಭಾವಿಸುವುದನ್ನು ವಿಡಿಯೊದಲ್ಲಿ ಕಾಣಬಹುದು.
ಬಾಲ್ಯವಿವಾಹಗಳು ಕಾನೂನುಬಾಹಿರವಾಗಿದ್ದರೂ, 2019 ಕ್ಕೆ ಹೋಲಿಸಿದರೆ 2020 ರಲ್ಲಿ ಭಾರತದಲ್ಲಿ ಬಾಲ್ಯವಿವಾಹ ಪ್ರಕರಣಗಳಲ್ಲಿ ಸುಮಾರು 50 ಪ್ರತಿಶತದಷ್ಟು ಹೆಚ್ಚಳವನ್ನು ತೋರಿಸುವ ದತ್ತಾಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚೆಗೆ ಬಿಡುಗಡೆ ಮಾಡಿದೆ. 2018 ರಲ್ಲಿ, 7% ಹೆಣ್ಣು ಮಕ್ಕಳು 15 ವರ್ಷ ವಯಸ್ಸಿನೊಳಗೆ ಮದುವೆಯಾಗುತ್ತಾರೆ ಮತ್ತು 27% ರಷ್ಟು 18 ವರ್ಷಕ್ಕಿಂತ ಮೊದಲು ಮದುವೆಯಾಗುತ್ತಾರೆ ಎಂದು UNICEF ನಡೆಸಿದ ಸಮೀಕ್ಷೆಯು ಹೇಳಿದೆ.

ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

ಬಾಲ್ಯ ವಿವಾಹವು ಜೀವನದ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಹೆಣ್ಣು ಮಗುವಿನ ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಅನ್ಯಾಯಗಳನ್ನು ತಡೆಯಲು ಸರ್ಕಾರ ತಕ್ಷಣದ ಮತ್ತು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement