ಭಾರತದಲ್ಲಿ 26 ಓಮಿಕ್ರಾನ್ ಪ್ರಕರಣಗಳು ಪತ್ತೆ, ಮಾಸ್ಕ್ ಬಳಕೆಯಲ್ಲಿ ಕುಸಿತ, ಮತ್ತೆ ಎಚ್ಚರಿಸಿದ ಕೇಂದ್ರ

ನವದೆಹಲಿ: ದೇಶದಲ್ಲಿ ಇದುವರೆಗೆ ಒಟ್ಟು 26 ಓಮಿಕ್ರಾನ್ (Omicron) ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ಪ್ರಕರಣಗಳು ಸೌಮ್ಯ ಲಕ್ಷಣಗಳನ್ನು ಹೊಂದಿವೆ. ಇವುಗಳಲ್ಲಿ ಶೇ 0.04ಕ್ಕಿಂತ ಕಡಿಮೆ ರೂಪಾಂತರಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ವಾರ ದೇಶದಲ್ಲಿ ಒಟ್ಟಾರೆ ಧನಾತ್ಮಕತೆಯ ದರ ಶೇ 0.73 ಆಗಿತ್ತು. ಕಳೆದ 14 ದಿನಗಳಲ್ಲಿ 10,000 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳಿದ್ದು ಮೊದಲು ಶೇ 43ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಮತ್ತು ನಂತರ ಶೇ10 ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಈಗ 59 ದೇಶಗಳಲ್ಲಿ 2,936 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, 78,054 ಸಂಭವನೀಯ ಪ್ರಕರಣಗಳು ಪತ್ತೆಯಾಗಿವೆ. ಅವುಗಳ ಜೀನೋಮ್ ಸೀಕ್ವೆನ್ಸಿಂಗ್ ನಡೆಯುತ್ತಿದೆ. ವ್ಯಾಕ್ಸಿನೇಷನ್ ಜೊತೆಗೆ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಿರಂತರವಾಗಿ ಅನುಸರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ . ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಯಾಕೆಂದರೆ ಸಾರ್ವಜನಿಕ ಆರೋಗ್ಯ ನಿಯಮಗಳ ಸಡಿಲತೆ ಯುರೋಪ್‌ನಲ್ಲಿ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಘಿದೆ ಎಂದು ಅಗರ್ವಾಲ್ ಹೇಳಿದರು.
ಓಮಿಕ್ರಾನ್ ರೂಪಾಂತರದ ಚಿಕಿತ್ಸೆಯ ಪ್ರೋಟೋಕಾಲ್ ಒಂದೇ ಆಗಿರುತ್ತದೆ ಎಂದು ಸರ್ಕಾರ ಹೇಳಿದೆ.ಓಮಿಕ್ರಾನ್ ಇನ್ನೂ ಆರೋಗ್ಯ ವ್ಯವಸ್ಥೆಯ ಮೇಲೆ ಹೊರೆಯಾಗಿಲ್ಲದಿದ್ದರೂ, ಕಟ್ಟುನಿಟ್ಟಾದ ಜಾಗರೂಕತೆಯನ್ನು ನಿರ್ವಹಿಸಬೇಕಾಗಿದೆ ಎಂದು ಅದು ಹೇಳಿದೆ.
ಕಳೆದ ವಾರದಲ್ಲಿ ದೇಶದಲ್ಲಿ ಒಟ್ಟಾರೆ ಧನಾತ್ಮಕತೆಯ ಪ್ರಮಾಣವು ಶೇಕಡಾ 0.73 ರಷ್ಟಿತ್ತು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 14 ದಿನಗಳಲ್ಲಿ 10,000 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.
ಸಕ್ರಿಯ ಪ್ರಕರಣಗಳು ಎರಡು ರಾಜ್ಯಗಳಲ್ಲಿ ಅತಿ ಹೆಚ್ಚು – ಕೇರಳ43 ಶೇಕಡಾ ಮತ್ತು ನಂತರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ ಎಂದು ಲವ್‌ ಅಗರ್ವಾಲ್ ಹೇಳಿದರು.
ತಮ್ಮ ಕಣ್ಗಾವಲು ಹೆಚ್ಚಿಸಲು ಮತ್ತು ಇತರ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಸಕ್ರಿಯವಾಗಿ ಪರೀಕ್ಷಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್ 1 ರಿಂದ, 93 ಅಂತರಾಷ್ಟ್ರೀಯ ಪ್ರಯಾಣಿಕರು ಕೋವಿಡ್‌-19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಇವುಗಳಲ್ಲಿ 83 ಓಮಿಕ್ರಾನ್ ಬ್ರೇಕ್‌ಔಟ್ ಆದ “ಅಪಾಯದಲ್ಲಿದೆ” ಎಂದು ಗೊತ್ತುಪಡಿಸಿದ ದೇಶಗಳಿಂದ ಮತ್ತು 13 ಇತರ ದೇಶಗಳಿಂದ ಬಂದವರು ಎಂದು ಲವ ಅಗರ್ವಾಲ್ ಹೇಳಿದರು.
ಓಮಿಕ್ರಾನ್ ಮೇಲೆ ಕೇಂದ್ರೀಕರಿಸಿ ಭಾರತದಲ್ಲಿ ಜಾಗತಿಕ ಸನ್ನಿವೇಶ ಮತ್ತು ಕೋವಿಡ್ ಪರಿಸ್ಥಿತಿ ಪರಿಶೀಲನೆ ಮಾಡಲು ನಿಯಮಿತ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಶೇ. 5ಕ್ಕಿಂತ ಹೆಚ್ಚು ಸಕಾರಾತ್ಮಕತೆ ಇದ್ದಲ್ಲಿ ಜಿಲ್ಲಾ ಮಟ್ಟದ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಐಸಿಎಂಆರ್ ಮಹಾ ನಿರ್ದೇಶಕ ಬಲರಾಮ್ ಭಾರ್ಗವ ಹೇಳಿದರು.
ನಾವು ದಿನಕ್ಕೆ 80 ಲಕ್ಷ ಡೋಸ್‌ಗಳವರೆಗೆ ಲಸಿಕೆಗಳನ್ನು ನೀಡುತ್ತಿದ್ದೇವೆ ಮತ್ತು ಇದು ಸಂಪೂರ್ಣ ವಯಸ್ಕ ಜನಸಂಖ್ಯೆಯನ್ನು ಒಳಗೊಳ್ಳಲು ಮುಂದುವರೆಯಬೇಕು” ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ.
ರಕ್ಷಣೆಯ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ನಾವು ಈಗ ಅಪಾಯಕಾರಿ ಮತ್ತು ಸ್ವೀಕಾರಾರ್ಹವಲ್ಲದ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಮಾಸ್ಕ್ ಬಳಕೆ ಕಡಿಮೆಯಾಗುತ್ತಿದ್ದು, ಕೋವಿಡ್‌ ವಿರುದ್ಧ ಜಯಿಸಲು ಲಸಿಕೆಗಳು ಮತ್ತು ಮಾಸ್ಕ್ ಎರಡೂ ಮುಖ್ಯವೆಂದು ನಾವು ನೆನಪಿನಲ್ಲಿಡಬೇಕು. ಜಾಗತಿಕ ಪರಿಸ್ಥಿತಿ, ವಿಶೇಷವಾಗಿ ಯರೋಪಿನಲ್ಲಿ ಆದ ಉಲ್ಬಣದಿಂದ ನಾವು ಕಲಿಯಬೇಕು ಎಂದು ನೀತಿ ಆಯೋಗ್ಯ (ಆರೋಗ್ಯ) ಸದಸ್ಯ ಡಾ ವಿ.ಕೆ. ಪಾಲ್ ಹೇಳಿದ್ದಾರೆ.
ಮುಂಬೈನ ಧಾರಾವಿ ಪ್ರದೇಶದಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ವ್ಯಕ್ತಿ ತಾಂಜಾನಿಯಾದಿಂದ ಹಿಂದಿರುಗಿದ್ದರು. ಈಗ ಸೆವೆನ್‌ಹಿಲ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಹೇಳಿದೆ.
ಗುಜರಾತ್‌ನಲ್ಲಿ ಶುಕ್ರವಾರದಂದು ಗುಜರಾತ್‌ನಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದ ಎನ್‌ಆರ್‌ಐ ವ್ಯಕ್ತಿಯ ಪತ್ನಿ ಮತ್ತು ಸೋದರ ಮಾವ -19 ವಾರದ ಹಿಂದೆ ಗುಜರಾತ್‌ನ ಜಾಮ್‌ನಗರದಲ್ಲಿ ಪತ್ತೆಯಾಗಿದ್ದಾರೆ ಎಂದು ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ, ಗುಜರಾತ್‌ನಲ್ಲಿ ಈಗ ಓಮಿಕ್ರಾನ್‌ ಸೋಂಕಿತರ ಸಂಖ್ಯೆ ಮೂರಾಗಿದೆ.
ಶುಕ್ರವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಂದು ದಿನದಲ್ಲಿ 8,503 ಜನರು ಕೊರೊನಾ ದೃಢಪಟ್ಟಿದ್ದು, ಭಾರತದ ಕೊವಿಡ್ ಪ್ರಕರಣಗಳ ಸಂಖ್ಯೆ 3,46,74,744 ಕ್ಕೆ ಏರಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 94,943 ಆಗಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಮಾಹಿತಿಯ ಪ್ರಕಾರ, 624 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4,74,735 ಕ್ಕೆ ಏರಿದೆ. ಕಳೆದ 43 ದಿನಗಳಿಂದ ಹೊಸ ಕೊರೊನಾವೈರಸ್ ಸೋಂಕುಗಳ ದೈನಂದಿನ ಹೆಚ್ಚಳವು 15,000 ಕ್ಕಿಂತ ಕಡಿಮೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 94,943 ಕ್ಕೆ ಏರಿದೆ. ಇದು ಒಟ್ಟು ಸೋಂಕುಗಳ 0.27 ಪ್ರತಿಶತವನ್ನು ಒಳಗೊಂಡಿದೆ. ರಾಷ್ಟ್ರೀಯ ಕೊವಿಡ್ -19 ಚೇತರಿಕೆ ದರವು 98.36 ಪ್ರತಿಶತದಷ್ಟು ದಾಖಲಾಗಿದೆ, ಇದು ಮಾರ್ಚ್ 2020 ರಿಂದ ಅತಿ ಹೆಚ್ಚು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement