ಮೆಕ್ಸಿಕೊದಲ್ಲಿ ಟ್ರಕ್ ಟ್ರೇಲರ್ ಪಲ್ಟಿಯಾಗಿ ಕನಿಷ್ಠ 53 ಮಂದಿ ಸಾವು

ಮೆಕ್ಸಿಕೋ: ದಕ್ಷಿಣ ಮೆಕ್ಸಿಕೋದಲ್ಲಿ ವಲಸಿಗರನ್ನು ಸಾಗಿಸುತ್ತಿದ್ದ ಟ್ರಕ್ ಅಪಘಾತಕ್ಕೀಡಾದ ನಂತರ ಕನಿಷ್ಠ 53 ಜನರು ಮೃತಪಟ್ಟಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಅಮೆರಿಕದಿಂದ ವಲಸೆ ಬಂದವರು ಎಂದು ಹೇಳಲಾದ 100 ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿದ್ದ ಟ್ರಕ್‌ನ ಟ್ರೈಲರ್‌ ಚಿಯಾಪಾಸ್ ರಾಜ್ಯದಲ್ಲಿ ಉರುಳಿದೆ.
ಅಪಘಾತದ ದೃಶ್ಯದ ಚಿತ್ರಗಳು ಮೃತಪಟ್ಟವರು ಪಲ್ಟಿಯಾದ ಟ್ರಕ್‌ನ ಪಕ್ಕದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದನ್ನು ತೋರಿಸುತ್ತವೆ.
ಇದು ಮೆಕ್ಸಿಕೋದಲ್ಲಿ ಈ ರೀತಿಯ ಕೆಟ್ಟ ಅಪಘಾತಗಳಲ್ಲಿ ಒಂದಾಗಿದೆ, ಕನಿಷ್ಠ 58 ಜನರು ಗಾಯಗೊಂಡಿದ್ದಾರೆ, ಕೆಲವರು ಗಂಭೀರವಾಗಿದ್ದಾರೆ ಎಂದು ಚಿಯಾಪಾಸ್ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಗಾರ್ಸಿಯಾ ಹೇಳಿದ್ದಾರೆ.
ಮಧ್ಯ ಅಮೆರಿಕದಿಂದ ಬಂದ ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಟ್ರೈಲರ್ ಗುರುವಾರ ಟಕ್ಸ್‌ಟ್ಲಾ ಗುಟೈರೆಜ್ ಕಡೆಗೆ ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆದರೆ ಮೃತರನ್ನು ತಮ್ಮ ರಾಷ್ಟ್ರದವರೆಂಬ ಬಗ್ಗೆ ಅಲ್ಲಿನ ಸರ್ಕಾರ ದೃಢಪಡಿಸಿಲ್ಲ. ಅಪಘಾತದಲ್ಲಿ ಬದುಕುಳಿದಿರುವ ಕೆಲವರನ್ನು ನೆರೆಯ ದೇಶವಾದ ಗ್ವಾಟೆಮಾಲಾದಿಂದ ಬಂದವರು ಎಂದು ಮೊರೆನೊ ಹೇಳಿದ್ದಾರೆ.
ಘಟನೆ ವೇಳೆ 107 ಮಂದಿ ಟ್ರಕ್‍ನಲ್ಲಿದ್ದರು. ಟ್ರಕ್‍ನಲ್ಲಿ ಬಹಳಷ್ಟು ಜನ ಇದ್ದಿದ್ದರಿಂದ ಹೆಚ್ಚಿನ ಭಾರವೇ ಅಪಘಾತಕ್ಕೆ ಕಾರಣವಾಗಿರಬಹುದು. ದಕ್ಷಿಣ ಮೆಕ್ಸಿಕೋದಲ್ಲಿ ಸರಕು ಸಾಗಣೆ ಟ್ರಕ್‍ಗಳಲ್ಲಿ ವಲಸಿಗರ ಕಳ್ಳಸಾಗಣೆ ಸಾಮಾನ್ಯವಾಗಿದ್ದು, ಇದು ಸಹ ಹಾಗೆಯೇ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ ವೇಳೆ ಸಾಕಷ್ಟು ಮಂದಿ ವಲಸಿಗರಿದ್ದರು. ಮತ್ತೆ ಕೆಲ ವಲಸಿಗರು ಬಂಧನ ಭೀತಿಯಿಂದ ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement