ವಿದ್ಯುತ್‌ ದರ ಪ್ರತಿಯೂನಿಟ್‌ಗೆ 1.50 ರೂ. ದರ ಹೆಚ್ಚಳಕ್ಕೆ ಮನವಿ

* ಪ್ರತಿ ಯೂನಿಟ್‌ಗೆ 1.50 ರೂ. ಹೆಚ್ಚಳಕ್ಕೆ ಕೆಇಆರ್‌ಸಿಗೆ ಪ್ರಸ್ತಾವನೆ
* ವಿವಿಧ ವಿದ್ಯುತ್ ಕಂಪನಿಗಳಿಂದ ದರ ಏರಿಕೆಗೆ ಮನವಿ

ಬೆಂಗಳೂರು: ಜನಸಾಮಾನ್ಯರಿಗೆ ಮತ್ತೆ ವಿದ್ಯುತ್ ‘ಶಾಕ್’ ಎದುರಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ 1.50 ರೂ. ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ, ದಿನಬಳಕೆಯ ವಸ್ತುಗಳ ದರ ಗಗನಮುಖಿಯಾಗಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಹೀಗಿರುವಾಗ ರಾಜ್ಯದ ವಿದ್ಯುತ್ ಕಂಪನಿಗಳ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಸೇರಿದಂತೆ ಇತರ ವಿದ್ಯುತ್ ಕಂಪೆನಿಗಳು ಪ್ರತಿಬಾರಿಯಂತೆ ಈ ವರ್ಷವೂ ವಿದ್ಯುತ್ ದರ ಹೆಚ್ಚಳ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿವೆ. ಪ್ರತಿ ಯೂನಿಟ್ ವಿದ್ಯುತ್‌ಗೆ 2019ರಲ್ಲಿ 35 ಪೈಸೆ, 2020ರಲ್ಲಿ 30 ಪೈಸೆ ಹೆಚ್ಚಳ ಮಾಡಲಾಗಿದೆ.

 

 

 

ನಿಮ್ಮ ಕಾಮೆಂಟ್ ಬರೆಯಿರಿ

advertisement