ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ: ಪೊಲೀಸರ ತನಿಖೆಯಿಂದ ಬೆಳಕಿಗೆ

ಮಂಗಳೂರು: ಮಾರ್ಗನ್ಸ್ ಗೇಟ್‍ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದಕ್ಕೆ ಮತಾಂತರ ಯತ್ನವೇ ಕಾರಣ ಎಂದು ಮಂಗಳೂರು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನೂರ್ ಜಹಾನ್ ಎಂಬ ಮಹಿಳೆ ಮತಾಂತರ ಮಾಡಲು ಯತ್ನಿಸಿದ್ದು ದೃಢವಾಗಿದ್ದು ಆಕೆಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಶನಿವಾರ ತಿಳಿಸಿದ್ದಾರೆ.
ನೂರ್‌‌ಜಹಾನ್‌ ಮದುವೆ ಬ್ರೋಕರ್‌ ಕೆಲಸ ಮಾಡುತ್ತಿದ್ದು, ನಾಗೇಶಗೆ ಡೈವೋರ್ಸ್‌ ಕೊಡು, ಮುಸ್ಲಿಂ ಹುಡುಗನೊಂದಿಗೆ ನಿನ್ನ ವಿವಾಹ ಮಾಡಿಸುತ್ತೇನೆ ಎಂದು ಹೇಳಿದ್ದಳು. ವಿಜಯಲಕ್ಷ್ಮೀ ಅವರನ್ನು ಮಾತ್ರವಲ್ಲದೇ ಮಕ್ಕಳನ್ನೂ ಸಹ ಮತಾಂತರ ಮಾಡುವಂತೆ ನೂರ್‌‌ಜಹಾನ್‌‌‌‌ ಒತ್ತಾಯಿಸಿದ್ದಳು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಮಂಗಳೂರಿನ ಮಾರ್ಗನ್ಸ್ ಗೇಟ್‍ನಲ್ಲಿ ಒಂದೇ ಕುಟುಂಬದ ನಾಗೇಶ್ ಶೇರಿಗುಪ್ಪಿ(30), ಪತ್ನಿ ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಮತ್ತು ಸಮರ್ಥ್(4) ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಟುಂಬದ ಸಾವಿಗೆ ನಿಜವಾದ ಕಾರಣ ತಿಳಿಯಲು ಮಂಗಳೂರು ಪೊಲೀಸರು ತನಿಖೆ ನಡೆಸಿದ್ದಾರೆ. ಕುಟುಂಬದವರ ಸಾವಿಗೆ ಮತಾಂತರ ಯತ್ನವೇ ಕಾರಣ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ ಎ
ನಾಗೇಶ್‌ ಕುಟುಂಬ ಮೊದಲು ನೂರ್‌ಜಹಾನ್‌ ಅಪಾರ್ಟ್‌‌ಮೆಂಟ್‌ನಲ್ಲಿ ವಾಸಾಗಿದ್ದರು. ಬಳಿಕ ಅವರು ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. ಕೆಲ ಸಮಯದ ಹಿಂದೆ ವಿಜಯಲಕ್ಷ್ಮೀ ನೂರ್‌ಜಹಾನ್‌ ಮನೆಯಲ್ಲಿ ತಂಗಿದ್ದರು. ನೂರ್‌‌ಜಹಾನ್‌‌ ಮನೆಯಲ್ಲಿ ವಿಜಯಲಕ್ಷ್ಮೀ ಫೋಟೋ ಪತ್ತೆಯಾಗಿದೆ. ಆದರೆ, ಅವರು ಮತಾಂತರ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನೂರ್ ಜಹಾನ್ ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿದ್ದು, ನೀನು ಗಂಡನಿಗೆ ವಿಚ್ಛೇದನ ಕೊಟ್ಟು ನಮ್ಮ ಧರ್ಮಕ್ಕೆ ಮತಾಂತರವಾಗು, ನಂತರ ನಮ್ಮ ಧರ್ಮದಲ್ಲೇ ಒಂದು ಹುಡುಗನನ್ನು ನೋಡಿ ಮದುವೆ ಮಾಡಿಸುತ್ತೇನೆ ಎಂದು ಪುಸಲಾಯಿಸಿದ್ದಾರೆ. ನಾಗೇಶ ಜೊತೆ ಆತನ ಪತ್ನಿಗೆ ವಿಚ್ಛೇದನ ಕೊಡಿಸಲು ವಕೀಲರನ್ನೂ ಗೊತ್ತುಪಡಿಸಿದ್ದಳು ಎಂಬುದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

3 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement