ಕೇವಲ 2 ಗಂಟೆಗಳಲ್ಲಿ ಓಮಿಕ್ರಾನ್‌ ವೈರಸ್‌ ಪತ್ತೆ ಹಚ್ಚುವ ʼಪರೀಕ್ಷಾ ಕಿಟ್ʼ ಅಭಿವೃದ್ಧಿಪಡಿಸಿದ ಐಸಿಎಂಆರ್

ನವದೆಹಲಿ : ಅಸ್ಸಾಂನ ದಿಬ್ರುಗಢ್‌ನಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೊಸ ಕೋವಿಡ್ -19 ಪರೀಕ್ಷಾ ಕಿಟ್ ವಿನ್ಯಾಸಗೊಳಿಸಿದ್ದು, ಇದು ಕೇವಲ ಎರಡು ಗಂಟೆಗಳಲ್ಲಿ ಹೊಸ ಕೊರೊನಾ ವೈರಸ್ ರೂಪಾಂತರ ಓಮಿಕ್ರಾನ್ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಅನೇಕ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಈ ಬೆಳವಣಿಗೆ ಗಮನಾರ್ಹವಾಗಿದೆ.
ಇಲ್ಲಿಯವರೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಟ್ʼಗಳಿಂದ ವೈರಸ್ ಪತ್ತೆಹಚ್ಚಲು ಸಾಮಾನ್ಯವಾಗಿ ಸುಮಾರು 3-4 ದಿನಗಳು ತೆಗೆದುಕೊಳ್ಳುತ್ತಿವೆ. ಆರ್‌ಎಂಆರ್‌ಸಿಯ ವಿಜ್ಞಾನಿಗಳು ಹೊಸದಾಗಿ ಅಭಿವೃದ್ಧಿಪಡಿಸಿದ ಪರೀಕ್ಷಾ ಕಿಟ್ʼಗಳು ಕೋವಿಡ್-19ರ ಓಮಿಕ್ರಾನ್‌ ರೂಪಾಂತರವನ್ನ ಎರಡು ತಾಸಿನಲ್ಲಿ ಪತ್ತೆ ಹಚ್ಚಲು ಅನುವು ಮಾಡಿ ಕೊಡುತ್ತದೆ.
ವಿಜ್ಞಾನಿ ಡಾ. ಬಿಸ್ವಜ್ಯೋತಿ ಬೋರ್ಕಕೋಟಿ ನೇತೃತ್ವದ ಐಸಿಎಂಆರ್ ತಂಡವು ಈ ಹೊಸ ಕೋವಿಡ್ -19 ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ವಿಜ್ಞಾನಿಗಳ ತಂಡವು ಓಮಿಕ್ರಾನ್ ರೂಪಾಂತರವನ್ನು 2 ಗಂಟೆಗಳಲ್ಲಿ ಪತ್ತೆ ಮಾಡುತ್ತದೆ ಎಂದು ವರದಿ ತಿಳಿಸಿದೆ.
ಕೋಲ್ಕತ್ತಾ ಮೂಲದ ಕಂಪನಿ ಜಿಸಿಸಿ ಬಯೋಟೆಕ್ ಈಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಪರೀಕ್ಷಾ ಕಿಟ್ ಅನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುತ್ತದೆ.
ದೇಶವು ಇಲ್ಲಿಯ ವರೆಗೆ 33 ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ, ಇದು ಹೊಸ ಕೋವಿಡ್ -19 ರೂಪಾಂತರವಾಗಿದೆ, ಇದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ಆದಾಗ್ಯೂ, ಹೊಸ ರೂಪಾಂತರದ ಆರಂಭಿಕ ಪರೀಕ್ಷೆಯ ಪ್ರಕಾರ, ಇದು ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದಷ್ಟು ಶಕ್ತಿಯುತವಾಗಿಲ್ಲದಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ 41 ಔಷಧಗಳ ಬೆಲೆ ಕಡಿಮೆ ಮಾಡಿದ ಸರ್ಕಾರ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement