ಮಾಧ್ಯಮ ಲೋಕದಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ

ಬೆಂಗಳೂರು: ಡಿಜಿಟಲ್‌ ಯುಗದಲ್ಲಿ ಮಾಧ್ಯಮ ಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನೂತನವಾಗಿ ಕರ್ನಾಟಕ ಡಿಜಿಟಲ್‌ ಮೀಡಿಯಾ ಫೋರಂ ಅಸ್ತಿತ್ವಕ್ಕೆ ಬಂದಿದ್ದು, ಹಿರಿಯ ಪತ್ರಕರ್ತ ಸಮೀವುಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಡಿಜಿಟಲ್ ಮಾಧ್ಯಮ ಮಿತ್ರರ ಸಭೆಯಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ರಚಿಸಲಾಗಿದೆ.
ನೂತನ ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಡಿಜಿಟಲ್ ಮೀಡಿಯಾ ಆಧುನಿಕ ಯುಗಕ್ಕೆ ಅವಶ್ಯಕವಾಗಿದ್ದು, ಪ್ರಿಂಟ್ ಹಾಗೂ ಟಿವಿ ಮಾಧ್ಯಮಗಳಿಗಿಂತಲೂ ಪರಿಣಾಮಕಾರಿಯಾಗುತ್ತಿದೆ. ಡಿಜಿಟಲ್ ಮೀಡಿಯಾ ವೀಕ್ಷಕರು ಮತ್ತು ಓದುಗರನ್ನು ಹೆಚ್ಚು ತಲುಪಲು ತನ್ನದೇ ಆದ ಸಾಮರ್ಥ್ಯ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಡಿಜಿಟಲ್ ಮಾಧ್ಯಮಗಳಿಗೆ ಒತ್ತು ನೀಡಿವೆ. ಪಕ್ಕದ ರಾಜ್ಯಗಳಾದ ಆಂದ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಡಿಜಿಟಲ್ ಮಾಧ್ಯಮ ಒಕ್ಕೂಟ ಅಸ್ತಿತ್ವದಲ್ಲಿವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ನಮ್ಮ ಸಂಘಟನೆ ಮಾಧ್ಯಮ ಲೋಕದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇದರ ಅಗತ್ಯತೆ ಎಂದಿಗಿಂತಲೂ ಈಗ ಹೆಚ್ಚಿದೆ. ಹೀಗಾಗಿ ಡಿಜಿಟಲ್ ಮಿಡಿಯಾ ಫೋರಂ ಅಸ್ತಿತ್ವಕ್ಕೆ ಬಂದಿದ್ದು, ಪತ್ರಿಕೆ ಮತ್ತು ಮಾಧ್ಯಮಗಳಿಗೆ ನೀಡಿರುವಂತೆಯೇ ನಮಗೂ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಕಟ ಡಿಜಿಟಲ್‌ ಮೀಡಿಯಾ ಫೊರಂ ನ ನೂತನ ಅಧ್ಯಕ್ಷರಾಗಿ ಸಮೀವುಲ್ಲಾ ಬೆಲಗೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಸುನೀಲ್ ಮತ್ತು ವಸಂತ ಬಿ. ಈಶ್ವರಗೆರೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಿವು ಬೆಸಗರಹಳ್ಳಿ ಮತ್ತು ಜಂಟಿ ಕಾರ್ಯದರ್ಶಿಗಳಾಗಿ ರಜನಿ ಹಾಗೂ ಮಲತೇಶ್ ಅರಸ್ ಹರ್ತಿಕೋಟೆ ಮತ್ತು ಖಜಾಂಚಿಯಾಗಿ ಸನತ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎಸ್ ರಾಘವೇಂದ್ರ, ಗೌರೀಶ್ ಅಕ್ಕಿ, ವಿಜಯ್ ಭರಮಸಾಗರ, ದರ್ಶನ್ ಆರಾಧ್ಯ, ಪ್ರವೀಣ್ ಏಕಾಂತ, ಅಮರ್ ಪ್ರಸಾದ್, ಅಂಕಿತಾ, ಹರೀಶ್ ಅರಸು ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement