ಕೇವಲ ಒಂದೇ ದಿನದಲ್ಲಿ 10 ಕೋವಿಡ್ ಲಸಿಕೆ ತೆಗೆದುಕೊಂಡ ಭೂಪ..!

ಪ್ರಸ್ತುತ ಪರಿಸ್ಥಿತಿಯಲ್ಲಿ ವೈರಸ್ ಹರಡುವುದನ್ನು ತಡೆಯಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಬಯಸಿದರೆ ಕೋವಿಡ್‌-19 ಲಸಿಕೆ ಶಾಟ್ ಪಡೆಯುವುದು ಅನಿವಾರ್ಯವಾಗಿದೆ. ವಿವಿಧ ಕಂಪನಿಗಳ ಬಹುತೇಕ ಎಲ್ಲ ಕೋವಿಡ್‌-19 ಲಸಿಕೆಗಳು ಎರಡು ಡೋಸ್‌ಗಳನ್ನು ಒಳಗೊಂಡಿವೆ, ಆದರೆ ಒಬ್ಬ ವ್ಯಕ್ತಿಯು ಒಂದೇ ದಿನದಲ್ಲಿ ಕೋವಿಡ್‌-19 ಡೋಸನ್ನು ಪಡೆದಿದ್ದಾನೆ..!
ನ್ಯೂಜಿಲೆಂಡ್‌ನ ವ್ಯಕ್ತಿಯೊಬ್ಬರು ಕೇವಲ 24 ಗಂಟೆಗಳ ಅವಧಿಯಲ್ಲಿ ಒಟ್ಟು 10 ಕೋವಿಡ್‌-19 ಲಸಿಕೆ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ, ನಂತರ ಈ ಬಗ್ಗೆ ನ್ಯೂಜಿಲೆಂಡ್‌ ಆರೋಗ್ಯ ಸಚಿವಾಲಯವು ವಿವರವಾದ ತನಿಖೆಗೆ ಆದೇಶಿಸಿದೆ. ವ್ಯಕ್ತಿ ಹತ್ತು ಬಾರಿ ಕೋವಿಡ್‌ ಲಸಿಕೆ ಡೋಸ್‌ ತೆಗೆದುಕೊಂಡುದರ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.
ವ್ಯಕ್ತಿಯು ಒಂದೇ ದಿನದಲ್ಲಿ ಹಲವಾರು ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿದ್ದಾನೆ ಮತ್ತು ಲಸಿಕೆಯ ಪ್ರತಿ ಡೋಸ್‌ಗೆ ಹಣ ನೀಡಿದ್ದಾನೆ ಎಂದು ನಂಬಲಾಗಿದೆ. ಇದು ವ್ಯಕ್ತಿಗೆ ಅಪಾಯಕಾರಿಯಾಗಬಹುದು ಮತ್ತು ಲಸಿಕೆಯನ್ನು ಮಿತಿಮೀರಿ ತೆಗೆದುಕೊಂಡಿದ್ದು ಜೀವಕ್ಕೂಅಪಾಯವನ್ನುಂಟು ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ ಆರೋಗ್ಯ ಸಚಿವಾಲಯದ ಕೋವಿಡ್‌-19 ಲಸಿಕೆ ಮತ್ತು ಪ್ರತಿರಕ್ಷಣೆ ಕಾರ್ಯಕ್ರಮದ ಗುಂಪು ವ್ಯವಸ್ಥಾಪಕ ಆಸ್ಟ್ರಿಡ್ ಕಾರ್ನಿಫ್, ಈ ಬಗ್ಗೆ ಸಚಿವಾಲಯಕ್ಕೆ ತಿಳಿಸಲಾಗಿದೆ ಮತ್ತು ನಾವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಇದು ಅತ್ಯಂತ ಚಿಂತಾಜನಕ ಪರಿಸ್ಥಿತಿಯಾಗಿದೆ ಮತ್ತು ನಾವು ಅನೇಕ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಕೋವಿಡ್‌-19 ಲಸಿಕೆಯನ್ನು ಬಹು ಡೋಸ್ ತೆಗೆದುಕೊಂಡ ಯಾರಾದರೂ ನಿವಾಸಿಗಳಿಗೆ ತಿಳಿದಿದ್ದರೆ, ಅವರು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಲು ಸಲಹೆ ನೀಡಲಾಗುತ್ತದೆ. ಇಲ್ಲಿಯವರೆಗೆ, ಕೋವಿಡ್‌-19 ಡೋಸಿನ ಮಿತಿಮೀರಿ ತೆಗೆದುಕೊಂಡ ಕುರಿತು ಯಾವುದೇ ಡೇಟಾವನ್ನು ಸಂಗ್ರಹಿಸಲಾಗಿಲ್ಲ ಎಂದು ನ್ಯೂಜಿಲೆಂಡ್‌ನ ಆಡಳಿತವು ಹೇಳಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲವಾದರೂ ತನಿಖೆ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಕೋವಿಡ್-19 ಲಸಿಕೆಯನ್ನು ಹಲವು ಡೋಸ್‌ಗಳನ್ನು ತೆಗೆದುಕೊಳ್ಳುವುದು ಅವರ ಸಾಮಾನ್ಯ ದೈಹಿಕ ಕಾರ್ಯಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಆಕ್ಲೆಂಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ನಿಕ್ಕಿ ಟರ್ನರ್, ಕೋವಿಡ್‌-19 ಲಸಿಕೆಯ ಮಿತಿಮೀರಿ ತೆಗೆದುಕೊಂಡ ಬಗ್ಗೆ ಯಾವುದೇ ಡೇಟಾ ಲಭ್ಯವಿಲ್ಲದಿದ್ದರೂ, ಇದು ಮಾನವ ದೇಹಕ್ಕೆ ಒಳ್ಳೆಯದಲ್ಲ. ಬಹು ಡೋಸ್ ತೆಗೆದುಕೊಳ್ಳುವ ಅಡ್ಡಪರಿಣಾಮಗಳು ತುಂಬಾ ಹೆಚ್ಚಿರಬಹುದು ಎಂದು ಹೇಳಿದ್ದಾರೆ.
ಇದು ಖಂಡಿತವಾಗಿಯೂ ಸರಿಯಲ್ಲ. ಈ ಲಸಿಕೆಯ ಮಿತಿಮೀರಿದ ಸೇವನೆಯ ನಂತರ ವ್ಯಕ್ತಿಯು ಯಾವ ರೀತಿಯ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ. ಆದರೆ ಇದು ಸುರಕ್ಷಿತ ಅಭ್ಯಾಸವಲ್ಲ ಮತ್ತು ವ್ಯಕ್ತಿಯನ್ನು ಅಪಾಯಕ್ಕೆ

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ವಿವಾದ ; ಮಲಿವಾಲ್‌ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ, ಪ್ರಶ್ನೆಗೆ ಉತ್ತರಿಸದೆ ಮೈಕ್‌ ಮತ್ತೊಬ್ಬರಿಗೆ ಕೊಟ್ಟ ಕೇಜ್ರಿವಾಲ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement