ಮನುಷ್ಯರಂತೆ ಕಲ್ಲಿಗೆ ಉಜ್ಜಿ ಚಾಕು ಹರಿತ ಮಾಡಿದ ಮಂಗ..| ವಿಡಿಯೊ ವೀಕ್ಷಿಸಿ

ನಾವು ಮಾಡುವುದನ್ನೇ ಈಗ ಪ್ರಾಣಿಗಳು ಸಹ ಅನುಕರಿಸುತ್ತಿವೆ. ಇದಕ್ಕೊಂದು ಉತ್ತಮ ಉದಾಹರಣೆ ಈ ವಿಡಿಯೊದಲ್ಲಿ ಮಂಗ ನಮ್ಮನ್ನು ಅನುಕರಿಸುವುದನ್ನು ನೋಡಬಹುದು. ಮನುಷ್ಯರಂತೆ ಮಂಗವೊಂದು ಚಾಕುವನ್ನು ಕಲ್ಲಿಗೆ ಉಜ್ಜಿ ಹರಿತ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://twitter.com/rupin1992/status/1468835804046786560?ref_src=twsrc%5Etfw%7Ctwcamp%5Etweetembed%7Ctwterm%5E1468835804046786560%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fmonkey-sharpens-the-knife-viral-video%2F

ಈ ದೃಶ್ಯ ನೋಡಿದರೆ ನಗು ಬರುವುದು ಗ್ಯಾರಂಟಿ. ಜೊತೆಗೆ ಮಂಗನ ಬುದ್ಧಿವಂತಿಕೆಗೂ ತಲೆದೂಗುತ್ತೀರಿ. ಹೀಗಾಗಿ ಇನ್ಮುಂದೆ ಕಪಿಚೇಷ್ಟೆ ಎಂದು ಹೇಳಲು ಒಂದು ಸಲ ಯೋಚಿಸಬೇಕಾಗಬಹುದು. ಹಾಗಿದೆ ಕೋತಿ ಬುದ್ಧಿವಂತಿಕೆ.
ಕೋತಿ ಕಲ್ಲಿಗೆ ಚಾಕು ಉಚ್ಚಿ ಹರಿತ ಮಾಡುವ ಅಪರೂಪದ ವಿಡಿಯೊವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾವು ಸಿದ್ಧರಿದ್ದೇವೆ ಎಂಬ ಕ್ಯಾಪ್ಶನ್ ಕೊಡುವುದರ ಮೂಲಕ ಈ ವಿಡಿಯೊ ಅನೇಕರ ಗಮನ ಸೆಳೆದಿದೆ. ಅನೇಕರು ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

5 / 5. 1

ಪ್ರಮುಖ ಸುದ್ದಿ :-   3 ವರ್ಷದ ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ ; ಉಸಿರುಗಟ್ಟಿ ಪುಟ್ಟ ಬಾಲಕಿ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement