ಸಾಯುವ ಕೆಲವು ತಾಸುಗಳ ಮೊದಲು ರೆಕಾರ್ಡ್‌ ಮಾಡಿದ ಬಿಪಿನ್‌ ರಾವತ್‌ ಕೊನೆಯ ಸಾರ್ವಜನಿಕ ಸಂದೇಶ ವಿಡಿಯೊ ಸ್ವರ್ಣಿಮ್ ವಿಜಯ್ ಪರ್ವದಲ್ಲಿ ಬಿಡುಗಡೆ..ವೀಕ್ಷಿಸಿ

ನವದೆಹಲಿ: ಸೇನಾ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್ ದುರಂತ ನಡೆಯುವ ಒಂದು ದಿನದ ಮೊದಲು ರೆಕಾರ್ಡ್ ಮಾಡಿದ ಸಂದೇಶವನ್ನು ಭಾನುವಾರ ನವದೆಹಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.
ಸಂದೇಶದಲ್ಲಿ ದಿವಂಗತ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು 1971 ರ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯದ 50 ವರ್ಷಗಳ ಸ್ಮರಣಾರ್ಥವಾಗಿ ಆಚರಿಸಲಾಗುವ ‘ಸ್ವರ್ಣಿಮ್ ವಿಜಯ್ ಪರ್ವ್’ (Swarnim Vijay Parv) ಮತ್ತು ಭಾರತ-ಬಾಂಗ್ಲಾದೇಶ ಸ್ನೇಹಕ್ಕಾಗಿ ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ.
1971ರ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಅಪ್ನೆ ಸೇನಾವೋ ಪರ್ ಹೈ ಹಮೇ ಗರ್ವ್, ಆವೋ ಮಿಲ್ಕರ್ ಮನಾಯೇ ವಿಜಯ್ ಪರ್ವ್ (ನಮ್ಮ ಸೇನೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ, ಬನ್ನಿ ವಿಜಯಪರ್ವವನ್ನು ಒಟ್ಟಿಗೆ ಆಚರಿಸೋಣ) ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಡಿಎಸ್ ರಾವತ್ ಅವರ ನಿಧನದಿಂದಾಗಿ ‘ಸ್ವರ್ಣಿಮ್ ವಿಜಯ್ ಪರ್ವ’ ಅನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   3 ವರ್ಷದ ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ ; ಉಸಿರುಗಟ್ಟಿ ಪುಟ್ಟ ಬಾಲಕಿ ಸಾವು

ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಮಂದಿ ಬುಧವಾರ ತಮಿಳುನಾಡಿನ ಕುನ್ನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದರು.
ಕಾರ್ಯಕ್ರಮದಲ್ಲಿ 1971 ರ ಯುದ್ಧದ ಸಮಯದಲ್ಲಿ ಬಳಸಿದ ಪ್ರಮುಖ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಪ್ರಮುಖ ಯುದ್ಧಗಳ ದೃಶ್ಯ ತುಣುಕುಗಳೊಂದಿಗೆ ಪ್ರದರ್ಶಿಸಲಾಗುತ್ತದೆ. ಸಮಾರೋಪ ಸಮಾರಂಭವು ಡಿಸೆಂಬರ್ 13ರಂದು ನಡೆಯಲಿದೆ

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement