ಸೇನಾ ಹೆಲಿಕಾಪ್ಟರ್ ಪತನ: ವಿಡಿಯೊ ಸೆರೆ ಹಿಡಿದಿದ್ದ ಮೊಬೈಲ್ ಫೋನ್ ವಿಧಿವಿಜ್ಞಾನ ಪರೀಕ್ಷೆಗೆ

ಕುನೂರು (ತಮಿಳುನಾಡು): ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ (ಸಿಡಿಎಸ್‌) ಬಿಪಿನ್ ರಾವತ್ ಮತ್ತು ಇತರ 12 ಮಂದಿ ಸಾವಿಗೆ ಕಾರಣವಾದ ಅಪಘಾತಕ್ಕೀಡಾದ ಹೆಲಿಕಾಪ್ಟರಿನ ವಿಡಿಯೊವನ್ನು ಸ್ವಲ್ಪ ಮೊದಲು ರೆಕಾರ್ಡ್‌ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕೊಯಮತ್ತೂರಿನ ವೆಡ್ಡಿಂಗ್ ಛಾಯಾಗ್ರಾಹಕ ಜೋ ಅವರು ಡಿಸೆಂಬರ್ 8 ರಂದು ತಮ್ಮ ಸ್ನೇಹಿತ ನಜರ್ ಮತ್ತು ಅವರ ಕೆಲವು ಕುಟುಂಬ ಸದಸ್ಯರೊಂದಿಗೆ ಗುಡ್ಡಗಾಡು ನೀಲಗಿರಿ ಜಿಲ್ಲೆಯ ಕಟ್ಟೇರಿ ಪ್ರದೇಶಕ್ಕೆ ಫೋಟೋಗಳನ್ನು ಕ್ಲಿಕ್ಕಿಸಲು ಹೋಗಿದ್ದರು.
ಕುತೂಹಲದಿಂದ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ದುರದೃಷ್ಟಕರ ಹೆಲಿಕಾಪ್ಟರ್‌ನ ವೀಡಿಯೊವನ್ನು ಅದು ಅಪಘಾತಕ್ಕೀಡಾಗುವ ಕೆಲವೇ ಕ್ಷಣಗಳ ಮೊದಲು ರೆಕಾರ್ಡ್ ಮಾಡಿದ್ದರು. ಮಂಜಿನ ನಡುವೆ ಹೆಲಿಕಾಪ್ಟರ್ ಕಣ್ಮರೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಕರಣದ ತನಿಖೆಯ ಭಾಗವಾಗಿ ಜಿಲ್ಲಾ ಪೊಲೀಸರು ಜೋ ಅವರ ಮೊಬೈಲ್ ಫೋನ್ ಅನ್ನು ಕೊಯಮತ್ತೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಛಾಯಾಗ್ರಾಹಕ ಮತ್ತು ಅವರೊಂದಿಗೆ ಇನ್ನೂ ಕೆಲವರು ಕಾಡು ಪ್ರಾಣಿಗಳ ಸಂಚಾರದಿಂದ ನಿಷೇಧಿತ ಪ್ರದೇಶವಾಗಿರುವ ದಟ್ಟ ಅರಣ್ಯ ಪ್ರದೇಶಕ್ಕೆ ಏಕೆ ಹೋಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸ್ ಇಲಾಖೆಯು ಚೆನ್ನೈನ ಹವಾಮಾನ ಇಲಾಖೆಯಿಂದ ಆ ದಿನದಂದು ಪ್ರದೇಶದ ಹವಾಮಾನ ಮತ್ತು ತಾಪಮಾನಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳಿದೆ.
ಅಲ್ಲದೆ, ಅಪಘಾತದ ಬಗ್ಗೆ ಸುಳಿವುಗಳನ್ನು ಸಂಗ್ರಹಿಸಲು ಪೊಲೀಸರು ಸಾಕ್ಷಿಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎಂಐ-17ವಿಎಚ್ ಹೆಲಿಕಾಪ್ಟರ್ ಬುಧವಾರ ಕೂನೂರಿನ ಕಟ್ಟೇರಿ-ನಂಜಪ್ಪನ್‌ಛತ್ರಂ ಪ್ರದೇಶದ ಅರಣ್ಯ ಕಣಿವೆಯಲ್ಲಿ ಪತನಗೊಂಡಿದ್ದು, ಜನರಲ್ ರಾವತ್, ಅವರ ಪತ್ನಿ ಮತ್ತು ಇತರ 11 ಮಂದಿ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಓರ್ವ ಐಎಎಫ್ ಸಿಬ್ಬಂದಿ ಬದುಕುಳಿದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ 41 ಔಷಧಗಳ ಬೆಲೆ ಕಡಿಮೆ ಮಾಡಿದ ಸರ್ಕಾರ

2 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement