ಜೆಡಿಎಸ್‌ ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ ಕಾಂಗ್ರೆಸ್ಸಿಗೆ ಸೇರ್ಪಡೆ

ಬೆಳಗಾವಿ :ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ, ಮಾಜಿ ಶಾಸಕ ಕೋನರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ರಮೇಶ್ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತಿತರರಿದ್ದರು.
ಎನ್‌.ಎಚ್‌.ಕೋನರಡ್ಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋನರಡ್ಡಿ ನನ್ನ ಒಡನಾಟ ಬಹಳ ಹಳೆಯದು. ನಾನು ಜೆಡಿಎಸ್ ನಿಂದ ಬರುವಾಗಲೇ ನನ್ನ ಜೊತೆ ಬರಬೇಕಿತ್ತು. ಜೆಡಿಎಸ್ ನದ್ದು ಅನುಕೂಲ ಸಿಂಧು ರಾಜಕಾರಣ ಎಂದರು.
ಜೆಡಿಎಸ್ ನಿಂದ ಹೊರಬಂದಿದ್ದು ಒಳ್ಳೆ ತೀರ್ಮಾನ. ಅವರು ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ರಾಜಕಾರಣಿ ಎಂದರು.
ಕೋನರೆಡ್ಡಿ ಸ್ವಂತ ಶಕ್ತಿಯಿಂದ ಶಾಸಕರಾದವರು. ಬೇಷರತ್ತಾಗಿ ಪಕ್ಷ ಸೇರಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement