ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು.. ವಿಜ್ಞಾನಿಗಳಿಂದ ಹೊಸ ಆವಿಷ್ಕಾರ..!.

ಜಪಾನ್ ವಿಜ್ಞಾನಿಗಳು ಕೋವಿಡ್ -19 ವೈರಸ್ ಪತ್ತೆಹಚ್ಚುವ ಅದ್ಭುತ ಫೇಸ್ ಮಾಸ್ಕ್ (Corona Mask Test Covid) ಅಭಿವೃದ್ಧಿಪಡಿಸಿದ್ದಾರೆ…! ಮಾಸ್ಕ್ ಮೇಲೆ ಫ್ಲೋರೊಸೆಂಟ್ ಬೆಳಕಿನಿಂದ ಉಸಿರಾಟದಲ್ಲಿ ಕೊರೊನಾವೈರಸ್ ಪತ್ತೆಯಾಗುತ್ತದೆಯಂತೆ.
ಹಾಗೆಂದು ಮಾಸ್ಕ್‌ ಧರಿಸಲು ವಿಶೇಷ ಕೌಶಲ್ಯವೇನೂ ಇಲ್ಲ. ಮಾಸ್ಕ್ ಅನ್ನು ಸಾಮಾನ್ಯ ರೀತಿಯಲ್ಲಿಯೇ ಧರಿಸಿದರಾಯಿತು. ಕೋವಿಡ್-19 ವೈರಸ್‌ನ ಸಕ್ರಿಯತೆಯನ್ನು ಪತ್ತೆಹಚ್ಚಲು ಮಾಸ್ಕ್ ಮೇಲೆ ಕಂಡುಬರುವ ಕಣಗಳನ್ನು ಬಳಸಲಾಗುತ್ತದೆ. ಧರಿಸಿರುವ ಮಾಸ್ಕ್‌ನಿಂದ ಫಿಲ್ಟರ್‌ನಲ್ಲಿ ಪ್ರತಿಕಾಯಗಳನ್ನು ಸಿಂಪಡಿಸುವ ಮೂಲಕ ಕೋವಿಡ್ -19 ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನಂತರ, ಅಲ್ಟ್ರಾ ವಯಲೆಟ್‌ ಕಿರಣಗಳ ಅಡಿಯಲ್ಲಿ ಮಾಸ್ಕ್ ಇಟ್ಟುಕೊಳ್ಳುವಾಗ, ಮಾಸ್ಕ್ ಫ್ಲೋರೊಸೆಂಟ್ ದೀಪಗಳೊಂದಿಗೆ ಹೊಳೆಯುತ್ತದೆ. ಸ್ಮಾರ್ಟ್‌ಫೋನ್‌ನ ಎಲ್‌ಇಡಿ ಲೈಟ್ ಅನ್ನು ಕೂಡ ಬೆಳಕಿನ ಮೂಲವಾಗಿ ಬಳಸಿಕೊಳ್ಳಬಹುದು ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.
ಇದೇ ವಿಧಾನದಲ್ಲಿ ತ್ಸುಕಾಮೊಟೊ ಮತ್ತು ಅವರ ತಂಡವು 10 ದಿನಗಳ ಅವಧಿಯಲ್ಲಿ 32 ಕೋವಿಡ್ -19 ರೋಗಿಗಳನ್ನು ಪರೀಕ್ಷಿಸಿದೆ ಮತ್ತು ಅವರು ಧರಿಸಿದ್ದ ಮಾಸ್ಕ್ ಅಲ್ಟ್ರಾ ವಯಲೆಟ್‌ ಬೆಳಕಿನಲ್ಲಿ ಹೊಳೆಯುತ್ತಿರುವುದನ್ನು ಕಂಡುಹಿಡಿದಿದೆ ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ. ಮಾಸ್ಕ್ ಬಾಯಿಯ ಫಿಲ್ಟರ್‌ನಲ್ಲಿ ಇರಿಸಲಾಗಿರುವ ಕೊರೋನಾಗೆ ಆಸ್ಟ್ರಿಚ್ ಪ್ರತಿಕಾಯವು ಕೆಮ್ಮುವಿಕೆ, ಸೀನುವಿಕೆ ಮತ್ತು ನೀರಿನಲ್ಲಿ ಕೊರೊನಾವೈರಸ್ ಅನ್ನು ಸೆರೆಹಿಡಿಯುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ಬೆಳಕಿನೊಂದಿಗೆ ಸಂವಹನ ನಡೆಸುವ ಮೂಲಕ ಮತ್ತು ಫ್ಲೋರೊಸೆಂಟ್ ಡೈ-ಲೇಬಲ್ ಆಸ್ಟ್ರಿಚ್ ಪ್ರತಿಕಾಯದೊಂದಿಗೆ ಪ್ರತಿಕ್ರಿಯಿಸುವ ಮೂಲಕ ವೈರಸ್ ಇದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಯಲಾಗುತ್ತದೆಯಂತೆ. ಈ ತಂತ್ರಜ್ಞಾನಕ್ಕೆ ಪೇಟೆಂಟ್ ಗೆ ಸಲ್ಲಿಕೆಯಾಗಿದೆ, ಆದರೂ ಈ ತಪಾಸಣೆ ಕಿಟ್‌ಗಳು ವಾಣಿಜ್ಯ ಬಳಕೆಗೆ ಬರಲು ಜನರು ಸ್ವಲ್ಪ ಹೆಚ್ಚು ಕಾಯಬೇಕಾಗುತ್ತದೆ. ಈ ವರ್ಷವೇ ಜಪಾನ್ ಮತ್ತು ಸಾಗರೋತ್ತರದಲ್ಲಿ ಇದು ಜನರಿಗೆ ಲಭಿಸಬಹುದು ಎಂದು ಹೇಳಲಾಗಿದೆ. .

ಪ್ರಮುಖ ಸುದ್ದಿ :-   ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement