ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಮದುವೆಗೆ ಮೆರವಣಿಗೆಯಲ್ಲಿ ಬರುವಾಗ ಬೆಂಕಿ ಹೊತ್ತಿ ಉರಿದ ಮದುವೆ ಗಂಡು ಕುಳಿತಿದ್ದ ಕುದುರೆ ಗಾಡಿ..! ವೀಕ್ಷಿಸಿ

ಮದುವೆ ಗಂಡು ಮೆರವಣಿಗೆಯಲ್ಲಿ ಬರುತ್ತಿರುವಾಗಲೇ ಆತ ಕುಳಿತಿದ್ದ ಕುದುರೆ ಗಾಡಿ ಹೊತ್ತಿ ಉರಿದ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತಿನ ಪಂಚಮಹಲ್ ಜಿಲ್ಲೆಯಲ್ಲಿ ಮದುವೆ ಸ್ಥಳಕ್ಕೆ ವರ ಮೆರವಣಿಗೆ ಜೊತೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಮದುಮಗ ಕೆಲವು ಮಕ್ಕಳೊಂದಿಗೆ ಕುದುರೆ ಗಾಡಿಯು ಮದುವೆಯ ಸ್ಥಳದತ್ತ ಸಾಗುತ್ತಿದ್ದಾಗ ಮೆರವಣಿಗೆಯಲ್ಲಿದ್ದವರು ನೃತ್ಯ ಮಾಡುತ್ತಾ ಪಟಾಕಿ ಸಿಡಿಸುತ್ತಿದ್ದರು.  ಆ ಸಂರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹೊತ್ತಿಕೊಂಡ ಕುದುರೆ ಗಾಡಿಯಲ್ಲಿ ಇನ್ನೂ ಕೆಲವು ಪಟಾಕಿಗಳನ್ನು ಇರಿಸಲಾಗಿತ್ತು
ಮದುಮಗ ಸ್ವಲ್ಪದರಲ್ಲೇ ಪಾರಾಗಿದ್ದು, ಬೆಂಕಿ ಹೊತ್ತಿಕೊಂಡಾಗ ಗಾಡಿಯಿಂದ ಜಿಗಿಯುತ್ತಿರುವುದು ಕಂಡುಬಂದಿದೆ. ಅವರು ಸುರಕ್ಷಿತವಾಗಿ ಗಾಡಿಯಿಂದ ಇಳಿದಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಮದುವೆಯ ಮೆರವಣಿಗೆಯಲ್ಲಿ ನೆರೆದಿದ್ದವರು ಮತ್ತು ಜನರು ಬೆಂಕಿಯ ಮೇಲೆ ನೀರು ಸುರಿಯುವ ಮೂಲಕ ಬೆಂಕಿಯನ್ನು ನಂದಿಸಲು ಪ್ರಯತ್ನ ಪಡುವುದನ್ನು ವೀಡಿಯೊ ತೋರಿಸಿದೆ. ಅಕ್ಕಪಕ್ಕದವರು ಧಾವಿಸಿ ಅಕ್ಕಪಕ್ಕದ ಅಂಗಡಿಗಳಿಂದ ಬೆಂಕಿ ನಂದಿಸುವ ಸಾಧನಗಳನ್ನು ತಂದು ಬೆಂಕಿ ನಂದಿಸಿ ಮದುಮಗ ಹಾಗೂ ಇತರರನ್ನು ರಕ್ಷಿಸಿದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement