
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ಹಬ್ಬದ ಮುಂಗಡ ಮೊತ್ತವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈಗ ಹಬ್ಬದ ಮುಂಗಡ ಮೊತ್ತವನ್ನು 10 ಸಾವಿರ ರೂಪಾಯಿಗಳಿಂದ 25 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ.

ರಾಜ್ಯ ಸಿವಿಲ್ ಸೇವಾ

ವೃಂದದಲ್ಲಿ ಕಾಯಂ ಆಗಿ ಸೇರ್ಪಡೆಯಾಗಿರುವ ಅಖಿಲ ಭಾರತ ಸೇವೆಯ ಅಧಿಕಾರಿಗಳು ಸೇರಿದಂತೆ ಒಬ್ಬ ಕಾಯಂ ಸರ್ಕಾರಿ ನೌಕರನಿಗೆ ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿಗೆ ಮಾತ್ರ ಪ್ರಸ್ತುತ ಮಂಜೂರು ಮಾಡಲಾಗುತ್ತಿರುವ ಬಡ್ಡಿ ರಹಿತ ಹಬ್ಬದ ಮುಂಗಡವನ್ನು 10 ಸಾವಿರ ರೂ.ಗಳಿಂದ 25 ಸಾವಿರ ರೂ.ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಹಬ್ಬದ ಮುಂಗಡ ಮೊತ್ತವನ್ನ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವಂತೆ ಕೋರಿತ್ತು. ಈ ಮನವಿಗೆ ಸ್ಪಂದಿಸಿರುವ ಸರ್ಕಾರ 10 ತಿಂಗಳ ಅವಧಿಯಲ್ಲಿ ಮರು ಪಾವತಿಸಬಹುದಾದ ಬಡ್ಡಿ ರಹಿತ ಹಬ್ಬದ ಮುಂಗಡವನ್ನ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ