ಹಕ್ಕುಚ್ಯತಿ ಉಲ್ಲಂಘನೆ: ಕಾಂಗ್ರೆಸ್ ಶಾಸಕ ತುಕಾರಾಂ ಮನವಿ ಮೇರೆಗೆ ಸಂಡೂರು ತಹಶೀಲ್ದಾರ್ ವರ್ಗಾವಣೆ, ತನಿಖೆಗೆ ಆದೇಶ

ಬಳ್ಳಾರಿ: ಅಧಿವೇಶನದಲ್ಲಿ ನಿನ್ನೆ ಕಾಂಗ್ರೆಸ್ ಒತ್ತಾಯದ ಬೆನ್ನಲ್ಲೇ ಸಂಡೂರು ತಹಶೀಲ್ದಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ತಹಶಿಲ್ದಾರ್ ಹೆಚ್​. ಜಿ. ರಶ್ಮಿ ಅವರ ವರ್ಗಾವಣೆ ಜೊತೆಗೆ ಅವರ ಮೇಲಿನ ಆರೋಪದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಸಂಡೂರು ಶಾಸಕ ಇ. ತುಕಾರಾಂ ಅವರು ಕಚೇರಿಗೆ ಹೋದರೆ ತಮಗೆ ಗೌರವ ಕೊಡುವುದಿಲ್ಲ ಎಂದು ಆರೋಪ ಮಾಡಿದ್ದರು. ಶಾಸಕ ತುಕಾರಾಂ ನಿನ್ನೆ ರಶ್ಮಿ ವಿರುದ್ದ ಅಧಿವೇಶನದಲ್ಲಿ ಹಕ್ಕುಚುತಿ ಮಂಡಿಸಿದ್ದರು. ನಿನ್ನೆ ಅಧಿವೇಶನದಲ್ಲಿ ತಹಶೀಲ್ದಾರ್ ರಶ್ಮಿಯ ಅವರನ್ನ ಅಮಾನತ್ತು ಮಾಡುವಂತೆಯೂ ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದರು.
ಸದನದ ಗದ್ದಲದ ಬೆನ್ನಲ್ಲೇ ಸರ್ಕಾರ ಸಂಡೂರ ತಹಶೀಲ್ದಾರ್ ವರ್ಗಾವಣೆ ಮಾಡಿದೆ. ನಿನ್ನೆಯೇ ಅವರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆದೇಶ ಮಾಡಿದ್ದಾರೆ. ವರ್ಗಾವಣೆ ಬಳಿಕ ಸ್ಥಳ ನಿಯೋಜನೆ ಮಾಡದೇ ಬೆಂಗಳೂರಿನಲ್ಲಿರುವ ಬಹುಮಹಡಿ ಕಟ್ಟಡದಲ್ಲಿರುವ ಕಂದಾಯ ಇಲಾಖೆಯ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ರಶ್ಮಿ ಸ್ಥಾನಕ್ಕೆ ಪ್ರಭಾರಿ ತಹಶೀಲ್ದಾರ್ ಆಗಿ ವಿಶ್ವಜೀತ್ ಮೆಹ್ತಾ ಅವರನ್ನು ನೇಮಕ ಮಾಡಲಾಗಿದೆ. ತಹಶೀಲ್ದಾರ್ ರಶ್ಮಿ ಮೇಲೆ ಸಂಡೂರು ಶಾಸಕ ತುಕಾರಾಂ ಮಾಡಿದ ಆರೋಪಗಳ ತನಿಖೆಗೆ ಕಲಬುರಗಿ ಪ್ರಾದೇಶಿಕ ಆಯುಕ್ತರನ್ನ ತನಿಖಾಧಿಕಾರಿಯಾಗಿ ನೇಮಿಸಿ ಆದೇಶ ಮಾಡಲಾಗಿದೆ. ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಸಮಗ್ರ ತನಿಖೆ ಮಾಡಿ ವರದಿ ಕೊಡುವಂತೆ ಸರ್ಕಾರ ಆದೇಶ ಮಾಡಿದೆ.

ಪ್ರಮುಖ ಸುದ್ದಿ :-   ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement