ಬಿಸಿಸಿಐ ನೋಡಿಕೊಳ್ಳುತ್ತದೆ ಎಂದು ಕೊಹ್ಲಿ ಹೇಳಿಕೆಗೆ ಉತ್ತರ ಕೊಟ್ಟ ಗಂಗೂಲಿ

ಕೋಲ್ಕತ್ತಾ: ವಿರಾಟ್‌ ಕೊಹ್ಲಿ ನಡೆಸಿದ ವಿವಾದಾತ್ಮಕ ಪತ್ರಿಕಾಗೋಷ್ಠಿಯ ಒಂದು ದಿನದ ಬಳಿಕ ಮೌನ ಮುರಿದಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ, ಈ ವಿಚಾರವಾಗಿ ಕ್ರಿಕೆಟ್‌ ಮಂಡಳಿಯೇ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರವಾಗಿ ಬಿಸಿಸಿಐ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಭಾರತ ತಂಡದ ಮಾಜಿ ನಾಯಕರೂ ಆಗಿರುವ ಗಂಗೂಲಿ ಹೇಳಿದ್ದಾರೆ.
ಭಾರತ ತಂಡ ಡಿಸೆಂಬರ್‌ 16ರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಇದಕ್ಕೂ ಮುನ್ನಾ ದಿನವಾದ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಭಾರತದ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಭಾರತ ಟಿ20 ತಂಡದ ನಾಯಕತ್ವ ಬಿಟ್ಟ ಸಂದರ್ಭದಲ್ಲಿ ಯಾರೊಬ್ಬರು ಕೂಡ ತಮ್ಮನ್ನು ಸಂಪರ್ಕಿಸಿ ನಿರ್ಧಾರ ಪರಿಷ್ಕರಿಸುವಂತೆ ಕೇಳಿರಲಿಲ್ಲ ಎಂದು ಹೇಳಿದ್ದರು.
ಇದಕ್ಕೂ ಮೊದಲು ಗಂಗೂಲಿ ಟಿ20 ತಂಡದ ನಾಯಕತ್ವದ ನಿರ್ಧಾರ ಮತ್ತೊಮ್ಮೆ ಪರಿಶೀಲಿಸುವಂತೆ ತಾವು ಕೊಹ್ಲಿ ಬಳಿ ಮಾತನಾಡಿದ್ದಾಗಿ ಹೇಳಿಕೊಂಡಿದ್ದರು. ಇಬ್ಬರ ಹೇಳಿಕೆಯಲ್ಲಿನ ಈ ಗೊಂದಲ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಾಗೂ ಭಾರೀ ಚರ್ಚಾ ವಿಷಯವಾಗಿದೆ.
ಕೊಹ್ಲಿ ನಡೆಸಿದ ಪತ್ರಿಕಾಗೋಷ್ಠಿ ಬಳಿಕ ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್‌ ಶರ್ಮಾ ಪತ್ರಿಕಾಗೋಷ್ಠಿ ನಡೆಸುತ್ತಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಬಿಸಿಸಿಐ ಅವರಿಗೆ ಸೂಚಿಸಿದೆ ಎನ್ನಲಾಗಿದೆ.
ಈಗ ವೈಟ್‌ ಬಾಲ್‌ ಭಾರತದ ಟಿ20 ಹಾಗೂ ಏಕದಿನದ ಕ್ರಿಕೆಟ್‌ ತಂಡಕ್ಕೆ ರೊಹಿತ್‌ ಶರ್ಮಾ ಅವರನ್ನು ನಾಯಕರನ್ನಾಗಿ ಬಿಸಿಸಿಐ ನೇಂಕ ಮಾಡಿತ್ತು. ಇದರ ಬೆನ್ನಲ್ಲೇ ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲಿನ ಅಭ್ಯಾಸಕ್ಕೂ ಹಾಜರಾಗಿರಲಿಲ್ಲ, ಇದು ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾದ ನಂತರ ವಿರಾಟ್‌ ಕೊಹ್ಲಿ ತನಗೆ ರೊಹಿತ್‌ ನಾಯಕತ್ವದ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದರು ಹಾಗೂ ಏಕದಿನದ ಪಂದ್ಯಗಳಿಗೂ ಲಭ್ಯರಿರುವುದಾಗಿ ತಿಳಿಸಿದ್ದರು. ಹಾಗೂ ಬಿಸಿಸಿಐ ಹಾಗೂ ಅದರ ಅಧ್ಯಕ್ಷ ಸೌರವ ಗಂಗೂಲಿ ವಿರುದ್ಧ ಕೊಹ್ಲಿ ಸ್ಫೋಟಕ ಹೇಳಿಕೆ ನೀಡಿದ್ದರು. ಅದರ ಬೆನ್ನಿಗೇ ಸೌರವ್‌ ಗಂಗೂಲಿ ಇದಕ್ಕೆ ಬಿಸಿಸಿಐ ಇದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ.
ಭಾರತ ತಂಡ ಡಿ.26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನಾಡಲಿದ್ದು, ಜನವರಿಯಲ್ಲಿ ಅಷ್ಟೇ ಸಂಖ್ಯೆಯ ಏಕದಿನದ ಪಂದ್ಯಗಳನ್ನು ಆಡಲಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement