ಮದುವೆ ಮಂಟಪದಲ್ಲೇ 10 ಲಕ್ಷ ರೂ.ವರದಕ್ಷಿಣೆ ಡಿಮ್ಯಾಂಡ್‌: ವರನಿಗೆ ಬಿತ್ತು ಬರೋಬ್ಬರಿ ಗೂಸಾ..!

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಹೆಚ್ಚಿನ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದಕ್ಕಾಗಿ ವರ ಎಂದು ಹೇಳಲಾದ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ. ವ್ಯಕ್ತಿಯನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶುಕ್ರವಾರ ರಾತ್ರಿ ಮದುವೆ ನಡೆಯುತ್ತಿದ್ದ ಸಾಹಿಬಾಬಾದ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.
ವಿಡಿಯೋದಲ್ಲಿ, ಕೆಲವರು ಶೇರ್ವಾಣಿ ಧರಿಸಿದ್ದ ವ್ಯಕ್ತಿಯನ್ನು ಸುತ್ತುವರೆದು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದನ್ನು ಕಾಣಬಹುದು. ವರನನ್ನು ಸಭಾಂಗಣದಲ್ಲಿ ಎಳೆದೊಯ್ದು ಥಳಿಸಿದ್ದಾರೆ.
ಕೊನೆಗೆ ವರನನ್ನು ಆತನ ಸಂಬಂಧಿ ಎನ್ನಲಾದ ಮಹಿಳೆ ರಕ್ಷಿಸಿದ್ದಾಳೆ. ಈ ಹೈಡ್ರಾಮಾ ಮಧ್ಯೆ, ಬ್ಯಾಂಕ್ವೆಟ್ ಹಾಲ್ ಸಿಬ್ಬಂದಿ ಮತ್ತು ಇತರ ಅತಿಥಿಗಳು ಘಟನೆಯ ವಿಡಿಯೊ ಮಾಡುತ್ತಿರುವುದು ಕಂಡುಬಂದಿದೆ.
ಹೆಚ್ಚಿನ ವರದಕ್ಷಿಣೆ ಕೇಳಿದ್ದಕ್ಕೆ ವಧುವಿನ ಕಡೆಯವರು ವ್ಯಕ್ತಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ ಎನ್ನಲಾಗಿದೆ.
10 ಲಕ್ಷ ರೂ ಡಿಮ್ಯಾಂಡ್‌..
ಲೋಕ್‌ಮತ್ ಟೈಮ್ಸ್‌ನ ವರದಿಯ ಪ್ರಕಾರ, ವರನ ತಂದೆ ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಮತ್ತು ಬೇಡಿಕೆಯನ್ನು ಈಡೇರಿಸದಿದ್ದರೆ ಮದುವೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ವಧುವಿನ ಮನೆಯವರು ಈಗಾಗಲೇ 3 ಲಕ್ಷ ರೂಪಾಯಿ ನಗದು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ವರನ ಕಡೆಯವರಿಗೆ ಸಮಾಧಾನವಾಗಲಿಲ್ಲ. ಸಾಕಷ್ಟು ಮನವೊಲಿಸಿದರೂ ವರನ ಮನೆಯವರಿಗೆ ಮನವರಿಕೆ ಆಗಲಿಲ್ಲ. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರನಿಗೆ ಥಳಿಸಿದ್ದಾರೆ.
ಈ ಹಿಂದೆ 2-3 ಬಾರಿ ಮದುವೆಯಾಗಿದ್ದ ಎಂದು ವಧುವಿನ ಕಡೆಯವರು ಹೇಳಿಕೊಂಡಿದ್ದಾರೆ. ವರನನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು ಆಗ್ರಾ ನಿವಾಸಿ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement