ಶಿಗ್ಗಾವಿಯಲ್ಲಿ ಸಿಎಂ ಭಾವುಕ : ಸ್ವಕ್ಷೇತ್ರದಲ್ಲಿ ಬೊಮ್ಮಾಯಿ ಕಣ್ಣೀರು..!

ಹಾವೇರಿ: ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ. ಈ ಸ್ಥಾನಮಾನಗಳೂ ಶಾಶ್ವತ ಅಲ್ಲ. ಈ ಅರಿವು ನಮಗೆ ಪ್ರತಿ ಕ್ಷಣ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಹೇಳಿದ್ದಾರೆ.
ಶಿಗ್ಗಾವಿ ಪಟ್ಟಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಕ್ಷೇತ್ರದ ಹೊರಗೆ ನಾನು ಗೃಹ ಮಂತ್ರಿ, ನೀರಾವರಿ ಸಚಿವ, ಮುಖ್ಯಮಂತ್ರಿ. ಆದರೆ ಶಿಗ್ಗಾವಿಗೆ ಬಂದಾಗ ಕೇವಲ ಬಸವರಾಜ ಬೊಮ್ಮಾಯಿ ಮಾತ್ರ. ಇಲ್ಲಿ ಬಸವರಾಜ ಬೊಮ್ಮಾಯಿ ಎನ್ನುವುಷ್ಟೇ ಶಾಶ್ವತ, ಉಳಿದೆಲ್ಲ ಅಧಿಕಾರ ಪದವಿ ಶಾಶ್ವತ ಅಲ್ಲ, ಅದರ ಹಿಂದಿನ ಪದನಾಮಗಳು ಶಾಶ್ವತವಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
“ಭಾವನಾತ್ಮಕವಾಗಿ ಮಾತಾಡಬಾರದು ಅಂತ ನಾನು ಬಹಳ ಪ್ರಯತ್ನ ಮಾಡುತ್ತೇನೆ. ಆದರೆ ನಿಮ್ಮನ್ನು ನೋಡಿದಾಗ ನಾನು ಭಾವುಕನಾಗಿ ಬಿಡುತ್ತೇನೆ. ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ನಿಮ್ಮ ಆಶೀರ್ವಾದ ಶಕ್ತಿ ಇಲ್ಲಿವರೆಗೂ ತಂದು ನಿಲ್ಲಿಸಿದೆ” ಎಂದು ಹೇಳಿದರು.
ನಾನು ನಿಮ್ಮೂರಿಗೆ ಬಂದಾಗ ನೀವು ರೊಟ್ಟಿ ತಿನ್ನಿಸಿದ್ದೀರಿ, ನವಣೆ ಅನ್ನ ಮಾಡಿ ಹಾಕಿದ್ದೀರಿ. ನಾನೇನೂ ಕೆಲಸ ಮಾಡಿದರೂ ಆ ಋಣ ತೀರಿಸಲು ಆಗುವುದಿಲ್ಲ ಎಂದು ಭಾವುಕರಾದ ಬೊಮ್ಮಾಯಿ ಕಣ್ಣೀರಿಟ್ಟರು.
ಇದು ಸಂತರ ನಾಡು, ಇಲ್ಲಿ ವೈಚಾರಿಕ ಕ್ರಾಂತಿಯನ್ನ ಮಾಡಿದ ಗುರುಗಳಿದ್ದಾರೆ. ಕನಕದಾಸರು, ಸಂತ ಶಿಶುನಾಳ ಶರೀಫರು ಇದ್ದ ತಾಲೂಕು” ಎಂದು ಹೇಳಿದ್ದಾರೆ. ಇದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement