ಮನಿಲಾ: ಫಿಲಿಪೈನ್ಸ್ನಲ್ಲಿ ಅಪ್ಪಳಿಸಿದ ರೈ ಟೈಫೂನ್ (ಚಂಡಮಾರುತ) ಚಂಡಮಾರುತದಿಂದ ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ತೀವ್ರ ಹಾನಿಗೊಳಗಾದ ದ್ವೀಪಗಳಿಗೆ ನೀರು ಮತ್ತು ಆಹಾರವನ್ನು ತಲುಪಿಸುವ ಪ್ರಯತ್ನಗಳು ತೀವ್ರಗೊಂಡಿವೆ.
ಗಂಟೆಗೆ 195 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸೂಪರ್ ಟೈಫೂನ್ ಆಗಿ ಗುರುವಾರ ಚಂಡಮಾರುತವು ಫಿಲಿಪೈನ್ಸ್ಗೆ ಅಪ್ಪಳಿಸಿದ್ದರಿಂದ ಪ್ರವಾಹದಲ್ಲಿ ಗ್ರಾಮಗಳು ಮುಳುಗಿ ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರಬಲ ಚಂಡಮಾರುತ ಅಪ್ಪಳಿಸುವ ಮೊದಲೇ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಮತ್ತು ಮಧ್ಯದ್ವೀಪ ಪ್ರಾಂತ್ಯಗಳಲ್ಲಿ ವಿದ್ಯುತ್ ಇಲ್ಲದೆ ಮೊಬೈಲ್ ನೆಟ್ವರ್ಕ್ ಇಲ್ಲದೆ ಜನ ಸಂಪರ್ಕ ಕಳೆದುಕೊಂಡಿದ್ದಾರೆ.
ಫಿಲಿಪೈನ್ಸ್ನ ಜನಪ್ರಿಯ ಪ್ರವಾಸಿ ತಾಣವಾಗಿರುವ ಬೋಹೋಲ್ನ ಗವರ್ನರ್ ಆರ್ಥರ್ ಯಾಪ್ ಅವರು ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಾನಿಗೊಳಗಾದ ದ್ವೀಪದ ಮೇಯರ್ಗಳು ತಮ್ಮ ಪಟ್ಟಣಗಳಲ್ಲಿ 49 ಜನ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರೈ ಟೈಫೂನ್ (ಚಂಡಮಾರುತ) ದ್ವೀಪಸಮೂಹದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳನ್ನು ಧ್ವಂಸಗೊಳಿಸಿದ್ದರಿಂದ 3,00,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳು ಮತ್ತು ಬೀಚ್ಫ್ರಂಟ್ ರೆಸಾರ್ಟ್ಗಳನ್ನು ತೊರೆದಿದ್ದಾರೆ.
ಇದು ಕಳೆದ ದಶಕಗಳಲ್ಲಿ ಫಿಲಿಪೈನ್ಸ್ಗೆ ಅಪ್ಪಳಿಸಿದ ಭಾರೀ ಚಂಡಮಾರು ಎಂದು ಹೇಳಲಾಗಿದೆ. 18 ಸಾವಿರಕ್ಕೂ ಹೆಚ್ಚು ಮಿಲಿಟರಿ, ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳಿಗೆ ತಲುಪಿದ್ದಾರೆ.
ಗಂಟೆಗೆ 195 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸೂಪರ್ ಟೈಫೂನ್ ಆಗಿ ಗುರುವಾರ ಚಂಡಮಾರುತವು ಫಿಲಿಪೈನ್ಸ್ಗೆ ಅಪ್ಪಳಿಸಿದೆ. ಪ್ರವಾಹ ಪೀಡಿತ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಅಲ್ಲಿ ಕೆಲವು ನಿವಾಸಿಗಳನ್ನು ಅವರ ಮೇಲ್ಛಾವಣಿಯಿಂದ ರಕ್ಷಿಸಲಾಯಿತು. ವಿಶಾಲವಾದ ದ್ವೀಪಸಮೂಹದ ಕೆಟ್ಟ ಪೀಡಿತ ಪ್ರದೇಶಗಳಲ್ಲಿ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ಸಹಾಯ ಮಾಡಲು ಸಾವಿರಾರು ಮಿಲಿಟರಿ, ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ