ಕರ್ನಾಟಕದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ಸೋಂಕು ದೃಢ : ರಾಜ್ಯದಲ್ಲಿ 19ಕ್ಕೆ ಏರಿದ ಸೋಂಕಿತರ ಸಂಖ್ಯೆ

ಬೆಂಗಳೂರು : ರಾಜ್ಯವನ್ನು ನಿಧಾನವಾಗಿ ಓಮಿಕ್ರಾನ್ ಸೋಂಕು ಹೆಚ್ಚುತ್ತಿದೆ. ಇಂದು, ಸೋಮವಾರ ಮತ್ತೆ ಐವರಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ.
ಮೊನ್ನೆಯಷ್ಟೇ 5 ಮಂದಿಗೆ ಸೋಂಕು ಹರಡಿತ್ತು, ಇದೀಗ ಧಾರವಾಡ, ಉಡುಪಿ, ಭದ್ರಾವತಿ, ಮಂಗಳೂರಿನಲ್ಲಿ ಸೋಂಕು ದೃಢಪಟ್ಟಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ ಅವರು ಟ್ವೀಟ್‌ ಮಾಡಿದ್ದಾರೆ.
ಧಾರವಾಡದ 54 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕದಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಇವರು ಲಕ್ಷಣರಹಿತರಾಗಿದ್ದು, ಹೋಂ ಐಸೋಲೇಷನ್​ನಲ್ಲಿ ಇದ್ದಾರೆ. ಇವರ ಜೊತೆ ಪ್ರಾಥಮಿಕವಾಗಿ 4 ಹಾಗೂ 133 ದ್ವಿತೀಯ ಸಂಪರ್ಕಿತರು ಇದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ.

ಶಿವಮೊಗ್ಗದ ಭದ್ರಾವತಿಯ 20 ವರ್ಷದ ಮಹಿಳೆಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕದಿಂದ ಬಂದಿರಬಹುದೆಂಬ ಶಂಕಿಸಲಾಗಿದೆ. ಈಕೆಯ ಸಂಪರ್ಕದಲ್ಲಿದ್ದ 218 ಜನರನ್ನು ಪರೀಕ್ಷಿಸಿದಾಗ 26 ಜನರಿಗೆ ಸೋಂಕು ದೃಢಪಟ್ಟಿದೆ. ಸುಮಾರು 27 ಜನರ ಸ್ಯಾಂಪಲ್ಸ್ ಅನ್ನು ಜೀನೋಮ್ ಸೀಕ್ವೆನ್ಸಿಂಗ್​ಗೆ ಕಳುಹಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, 73 ವರ್ಷ ವಯಸ್ಸಿನ ವೃದ್ಧೆಗೆ ಸೋಂಕು ತಗುಲಿದ್ದು, ಯಾವುದೇ ರೋಗಲಕ್ಷಣಗಳು ಇಲ್ಲ. ಇವರ ಸಂಪರ್ಕದಲ್ಲಿದ್ದ ಕುಟುಂಬದ 11 ವರ್ಷದವನಿಗೆ ಪಾಸಿಟಿವ್ ದೃಢಪಟ್ಟಿದೆ. ಇವರ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಮೂವರಿಗೆ ಸೋಂಕು ತಗುಲಿದ್ದು ಮೂವರ ಸ್ಯಾಂಪಲ್ಸ್ ಜೀನೋಮ್ ಸೀಕ್ವೆನಿಂಗ್ಕ ಪರೀಕ್ಷೆಗೆ ಕಳುಹಿಸಲಾಗಿದೆ.
ಉಡುಪಿ ಜಿಲ್ಲೆಯ ಮತ್ತೊಂದು ಪ್ರಕರಣದಲ್ಲಿ 82 ವರ್ಷ ವಯಸ್ಸಿನ ವೃದ್ಧೆಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲ. ಸೋಂಕಿತ 73 ವರ್ಷ ವಯಸ್ಸಿನ ವೃದ್ಧೆ ಕುಟುಂಬದವರಾಗಿದ್ದಾರೆ‌.
ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದ್ದು 19 ವರ್ಷ ವಯಸ್ಸಿನ ಯುವತಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಈಕೆಗೆ ಪ್ರಾಥಮಿಕ ಸಂಪರ್ಕದಲ್ಲಿ 42 ಹಾಗೂ 293 ಜನರು ದ್ವಿತೀಯ ಸಂಪರ್ಕಿತರಿದ್ದು, ಇದರಲ್ಲಿ 18 ಜನರಿಗೆ ಕೋವಿಡ್​ ಪಾಸಿಟಿವ್ ಬಂದಿದೆ. 19 ಜನರ ಸ್ಯಾಂಪಲ್‌ಗಳನ್ನು ಜೀನೋಮ್ ಸಿಕ್ವೇನ್ಸಿಂಗ್ ಗೆ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ಭಾರಿ ಮಳೆ; ಕದ್ರಾ ಜಲಾಶಯದಿಂದ ನೀರು ಬಿಡುಗಡೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement