‘ಪನಾಮಾ ಪೇಪರ್ಸ್’ ಸೋರಿಕೆ ಪ್ರಕರಣದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಐದು ಗಂಟೆಗಳ ಕಾಲ ಗ್ರಿಲ್ ಮಾಡಿದ ಇಡಿ

ಮುಂಬೈ: ಪನಾಮಾ ಪೇಪರ್ಸ್’ಗೆ ಸಂಬಂಧಿಸಿದ ವಿದೇಶೀ ವಿನಿಮಯ ಉಲ್ಲಂಘನೆ ಆಪಾದನೆಗೆ ಸಂಬಂಧಿಸಿದಂತೆ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್ ಸೋಮವಾರ ಸಂಜೆ ಜಾರಿ ನಿರ್ದೇಶನಾಲಯದ (ಇಡಿ) ದೆಹಲಿ ಕಚೇರಿಯಿಂದ ಹೊರಬಂದಿದ್ದಾರೆ.
ಸದ್ಯಕ್ಕೆ ನಟಿಗೆ ಮತ್ತೆ ಸಮನ್ಸ್ ನೀಡುವ ಬಗ್ಗೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಹೇಳಿಕೆ ಬಂದಿಲ್ಲ. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮೂಲದ ಕಂಪನಿಯೊಂದರಲ್ಲಿ ತನ್ನ ಹಣವನ್ನು ಇರಿಸಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಆರು ಮಂದಿ ಅಧಿಕಾರಿಗಳ ತಂಡ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಐಶ್ವರ್ಯಾ ಅವರ ಮಾವ ಅಮಿತಾಭ್ ಬಚ್ಚನ್ ಅವರು ಸ್ಥಾಪಿಸಿದ ಸಂಸ್ಥೆಯ ಬಗ್ಗೆ 50 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರು ಮೊದಲು ಸಂಸ್ಥೆಯ ನಿರ್ದೇಶಕರಾಗಿದ್ದರು ಮತ್ತು ನಂತರ ಷೇರುದಾರರಾದರು.
ನಟಿಗೆ ಸಮನ್ಸ್ ನೀಡಿರುವುದು ಇದು ಮೂರನೇ ಬಾರಿ. ಆದಾಗ್ಯೂ, ಹಿಂದಿನ ಸಂದರ್ಭಗಳಲ್ಲಿ ಅವಳು ತನಿಖೆಗೆ ಹಾಜರಾಗಿರಲಿಲ್ಲ.
ನಾವು ಆಕೆಗೆ ಡಿಸೆಂಬರ್ 20 ಕ್ಕೆ ಸಮನ್ಸ್ ನೀಡಿದ್ದೆವು. ಮೂರನೇ ಸಮನ್ಸ್‌ಗೆ ಬದ್ಧರಾಗಿ, ಅವರು ತನಿಖೆಗೆ ಸೇರಿಕೊಂಡರು” ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
48 ವರ್ಷದ ಐಶ್ವರ್ಯಾ ರೈ ಬಚ್ಚನ್‌ ಅವರ ವಿಚಾರಣೆ ನಡೆಸಲಾಗುತ್ತಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ)ದ ನಿಬಂಧನೆಗಳ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಬರಿ ಕೈಯಲ್ಲಿ 15 ಅಡಿ ಉದ್ದದ ದೈತ್ಯ ಹೆಬ್ಬಾವು ಹಿಡಿದು ಆಟದ ಗೊಂಬೆಯಂತೆ ಹೊತ್ತುಕೊಂಡು ಹೋದ ಮಕ್ಕಳು...!

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement