ಹೆತ್ತಮ್ಮನಿಗೆ ಬೇಡವಾಯ್ತು ಕಂದಮ್ಮ… ತನ್ನ ಮರಿಗಳ ಜೊತೆ ನವಜಾತ ಶಿಶುವನ್ನು ರಕ್ಷಿಸಿತು ಬೀದಿನಾಯಿ…!

ಮುಂಗೇಲಿ (ಛತ್ತೀಸ್‌ಗಢ): ಕೊರೆಯುವ ಚಳಿಯಲ್ಲಿ ತಾಯಿಯೊಬ್ಬಳು ನವಜಾತ ಶಿಶುವೊಂದನ್ನು ಬೀದಿಯಲ್ಲಿ ಬಿಟ್ಟು ಹೋಗಿದ್ದು, ಅಚ್ಚರಿಯ ವಿದ್ಯಮಾನದಲ್ಲಿ ತಾಯಿಯಿಂದ ಪರಿತ್ಯಕ್ತ ಶಿಶುವನ್ನು ಬೀದಿ ನಾಯಿಗಳು ರಾತ್ರಿಯಿಡಿ ರಕ್ಷಣೆ ಮಾಡಿದ ಘಟನೆ ಛತ್ತೀಸ್​​ಗಢದ ಮುಂಗೇಲಿ ಜಿಲ್ಲೆಯ ಸರಿಸ್ಟಾಲ್​ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಿಂದ ಮಾನವೀಯತೆಯ ಮುಜುಗರದ ನಿದರ್ಶನಕ್ಕೆ ಇದು ಸಾಕ್ಷಿಯಾಗಿದೆ. ಕಲಿಯುಗದ ತಾಯಿ ತನ್ನ ಒಂದು ದಿನದ ನವಜಾತ ಶಿಶುವನ್ನು ನಾಯಿ ಮರಿಗಳ ಬಳಿ ಸಾಯಲು ಬಿಟ್ಟಿದ್ದಾಳೆ. ಈ ಇಡೀ ರಾತ್ರಿಯಲ್ಲಿ ಈ ಬೀದಿನಾಯಿ ನವಜಾತ ಶಿಶುವನ್ನು ತನ್ನ ಮರಿಗಳ ಜೊತೆಗೆ ಸ್ವಂತ ಮಗುವಿನಂತೆ ಕಾಪಾಡಿದೆ. ಬೆಳಿಗ್ಗೆ ಈ ನವಜಾತ ಶಿಶುವನ್ನು ಕಂಡ ಜನರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ಸರಿಸ್ಟಾಲ್​ ಗ್ರಾಮದಲ್ಲಿ ಶ್ವಾನವೊಂದು ತನ್ನ ಮರಿಗಳ ನಡುವೆ ಈ ಹಸುಗೂಸನ್ನ ರಕ್ಷಿಸಿದೆ. ಹೆಣ್ಣುಬೀದಿನಾಯಿ ಮತ್ತು ಅದರ ನಾಲ್ಕು ನಾಯಿಮರಿಗಳ ನಡುವೆ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಲೋರ್ಮಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಎಸ್‌ಐ ಚಿಂತಾರಾಮ್ ತಂಡ ಮಗುವನ್ನು ರಕ್ಷಿಸಿ, ಪರೀಕ್ಷೆ ನಡೆಸಿ ಮುಂಗೇಲಿಗೆ ಕರೆದೊಯ್ದು ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ನಡೆಸುತ್ತಿರುವ ಚೈಲ್ಡ್ ಲೈನ್ ಯೋಜನೆಯು ಬಾಲಕಿಗೆ ಆಕಾಂಕ್ಷಾ ಎಂದು ಹೆಸರಿಟ್ಟಿದೆ. ಇದೀಗ ಮಗು ಎಲ್ಲಿ ವಾಸಿಸುತ್ತದೆ ಎಂಬುದನ್ನು ಸಮಿತಿ ನಿರ್ಧರಿಸಲಿದೆ.
ತೀವ್ರ ಚಳಿಯ ನಡುವೆಯೂ ಕರುಳ ಬಳ್ಳಿಯನ್ನು ತೊರೆದು ಹೋದ ತಾಯಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳೀಯ ಸರಪಂಚ್‌ ಮುನ್ನಾಲಾಲ್‌ ಪಟೇಲ್‌ ಮಾತನಾಡಿ, ನಾವು ಕೆಲಸದ ನಿಮಿತ್ತ ಹೊರಗೆ ಬಂದಿದ್ದೆವು. ಬೆಳಗ್ಗೆ 11 ಗಂಟೆಗೆ ಗ್ರಾಮದಲ್ಲಿ ನಾಯಿಗಳ ಮಧ್ಯೆ ನವಜಾತ ಹೆಣ್ಣು ಮಗು ಇದ್ದದ್ದನ್ನು ಕಂಡು, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದೆವು. ಬಳಿಕ ನವಜಾತ ಶಿಶುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು ಎಂದು ತಿಳಿಸಿದ್ದಾರೆ.
ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಿಂದ ಮಾನವೀಯತೆಯ ಮುಜುಗರದ ಚಿತ್ರವೊಂದು ಹೊರಬಿದ್ದಿದೆ. ಕಲಿಯುಗದ ತಾಯಿ ತನ್ನ ಒಂದು ದಿನದ ನವಜಾತ ಶಿಶುವನ್ನು ನಾಯಿ ಮರಿಗಳ ಬಳಿ ಸಾಯಲು ಬಿಟ್ಟಿದ್ದಾಳೆ. ಈ ಇಡೀ ರಾತ್ರಿಯಲ್ಲಿ ನಾಯಿಯೊಂದು ನವಜಾತ ಶಿಶುವನ್ನು ತನ್ನ ಸ್ವಂತ ಮಗುವಿನಂತೆ ಬೆಳೆಸಿದೆ. ನವಜಾತ ಶಿಶುವನ್ನು ಕಂಡ ಜನರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement