ಓಮಿಕ್ರಾನ್ ರೂಪಾಂತರವು ಮೂರು ಪಟ್ಟು ಹೆಚ್ಚು ಹರಡುತ್ತದೆ: ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ನವದೆಹಲಿ: ಕೊರೊನಾವೈರಸ್ ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ರೂಪಾಂತರ ಮೂರು ಪಟ್ಟು ಸಾಂಕ್ರಾಮಿಕವಾಗಿದೆ ಮತ್ತು ಅದನ್ನು ನಿಯಂತ್ರಿಸಲು ವಾರ್ ರೂಮ್‌ಗಳನ್ನು ಸಕ್ರಿಯಗೊಳಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪತ್ರ ಬರೆದು ತಿಳಿಸಿದೆ.
ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸಹಿ ಮಾಡಿರುವ ಪತ್ರದಲ್ಲಿ “ ಹೆಚ್ಚಿನ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ ಮತ್ತು ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಕಳೆದ ಒಂದು ವಾರದಲ್ಲಿ ಶೇಕಡಾ 10 ಅಥವಾ ಅದಕ್ಕಿಂತ ಹೆಚ್ಚಿನ ಪರೀಕ್ಷಾ ಧನಾತ್ಮಕತೆ ಅಥವಾ ಆಮ್ಲಜನಕ ಬೆಂಬಲಿತ, ಐಸಿಯು (ICU) ಹಾಸಿಗೆಗಳ ಮೇಲೆ ಶೇಕಡಾ 40ರಷ್ಟು ರೋಗಿಗಳು ಭರ್ತಿಯಾಗಿದ್ದಾರೆ ಎಂದು ಕೇಂದ್ರ ಹೇಳಿದೆ. ಓಮಿಕ್ರಾನ್ ಜೊತೆಗೆ ಡೆಲ್ಟಾ ರೂಪಾಂತರವು ದೇಶದ ವಿವಿಧ ಭಾಗಗಳಲ್ಲಿ “ಇನ್ನೂ ಇದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಆದ್ದರಿಂದ ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಇನ್ನೂ ಹೆಚ್ಚಿನ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ, ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಕಟ್ಟುನಿಟ್ಟಾದ ನಿಯಂತ್ರಣ ಕ್ರಮದ ಅಗತ್ಯವಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶ ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವುದು ಅತ್ಯಂತ ತ್ವರಿತವಾಗಿ ಮತ್ತು ಕೇಂದ್ರೀಕೃತವಾಗಿರಬೇಕು. ಈ ಮಿತಿಗಳನ್ನು ತಲುಪುವ ಮೊದಲೇ ನಿಯಂತ್ರಣ ಕ್ರಮಗಳು ಮತ್ತು ನಿರ್ಬಂಧಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಹೇಳಿದೆ.
ಪರೀಕ್ಷೆ ಮತ್ತು ಕಣ್ಗಾವಲು ವಿಧಾನಗಳ ಅಂಗವಾಗಿ, ಕೇಂದ್ರವು ಮನೆ-ಮನೆಯ ಪ್ರಕರಣಗಳ ಹುಡುಕಾಟಗಳು, ಎಲ್ಲಾ ಕೊವಿಡ್ ಪಾಸಿಟಿವ್ ವ್ಯಕ್ತಿಗಳ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಓಮಿಕ್ರಾನ್‌ಗಾಗಿ ಕ್ಲಸ್ಟರ್ ಮಾದರಿಗಳ ಪರೀಕ್ಷೆಯನ್ನು ಉಲ್ಲೇಖಿಸಿದೆ. 100 ರಷ್ಟು ವ್ಯಾಕ್ಸಿನೇಷನ್ ಗುರಿ ತಲುಪಲು ಲಸಿಕಾಕರಣವನ್ನು ವೇಗಗೊಳಿಸಲು ರಾಜ್ಯಗಳನ್ನು ಕೇಳಲಾಗಿದೆ.
ಪತ್ರವು ರಾತ್ರಿ ಕರ್ಫ್ಯೂ, ದೊಡ್ಡ ಕೂಟಗಳ ನಿಯಂತ್ರಣ, ಕಚೇರಿಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸಂಖ್ಯೆಯಲ್ಲಿ ನಿರ್ಬಂಧಗಳನ್ನು ಒಳಗೊಂಡಿರುವ ಕಂಟೇನ್ಮೆಂಟ್ ಕ್ರಮಗಳನ್ನು ಪಟ್ಟಿಮಾಡಿದೆ.ಆಸ್ಪತ್ರೆಯ ಹಾಸಿಗೆಗಳು, ಆಂಬ್ಯುಲೆನ್ಸ್‌ಗಳು, ಆಮ್ಲಜನಕ ಉಪಕರಣಗಳು ಮತ್ತು ಔಷಧಗಳು ಸೇರಿದಂತೆ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ತುರ್ತು ನಿಧಿಯನ್ನು ಬಳಸಬೇಕೆಂದು ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement