ಬೆಂಗಳೂರು: ಎಂಇಎಸ್- ಶಿವಸೇನೆಯ ಪುಂಡಾಟಿಕೆಯ ವಿರುದ್ಧ ಕನ್ನಡಪರ ಸಂಘಟನೆಗಳು ಗುಡುಗಿದ್ದು, ಇದೇ ಡಿಸೆಂಬರ್ 31 ರಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಬೆಳಗಾವಿ ರಾಜಕಾರಣಿಗಳು ಮರಾಠಿಗರ ಗುಲಾಮರಾಗಿದ್ದಾರೆ. ಬೆಳಗಾವಿ ಎಲ್ಲ ಸರ್ಕಾರಗಳು ಇವರನ್ನು ಪೋಷಿಸತ್ತಾ ಬೆಳೆಸುತ್ತಾ ಬಂದಿದ್ದಾರೆ ಎಂದು ಕಿಡಿಕಾರಿದರು.
ಡಿ. 31ರಂದು ಕರ್ನಾಟಕ ಬಂದ್ ಕರೆಬೆಳಗ್ಗೆ 6 ರಿಂದ ಸಂಜೆ 6 ತನಕ ಬಂದ್ ಇರಲಿದ್ದು, ರಾಜ್ಯಾದ್ಯಂತ ಎಲ್ಲ ಚಟುವಟಿಕೆಗಳು ಬಂದ್ ಆಗಬೇಕು. ಇದಕ್ಕಾಗಿ ಎಲ್ಲರೂ ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
. ಆಸ್ಪತ್ರೆ, ತುರ್ತುಸೇವೆ ಹಾಗೂ ಅಗತ್ಯ ಸೇವೆ ಹೊರತು ಪಡಿಸಿ ಮಿಕ್ಕೆಲ್ಲ ಸೇವೆಗಳು ಬಂದ್ ಆಗಲಿದೆ ಅಂತ ವಾಟಾಳ್ ತಿಳಿಸಿದರು.ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಕರ್ನಾಟಕ ಬಂದ್ ಆಗಲಿದ್ದು, ಟೌನ್ ಹಾಲ್ ನಿಂದ ಬೃಹತ್ ಮೆರವಣಿಗೆ ನಡೆಸಲಿದ್ದೇವೆ. ಈ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶನ ತೋರಿಸಲಿದ್ದೇವೆ. ನಮಗೆ ಯಾವ ಸಂಘಟನೆಗಳ ನೈತಿಕ ಬೆಂಬಲ ಬೇಡ, ಬದಲಿಗೆ ನೇರ ಬೆಂಬಲ ನೀಡಿ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ತಿಳಿಸಿದರು.
ಇವತ್ತು ನಮ್ಮವರನ್ನ ಹೊಡೆದಿದ್ದು, ಕನ್ನಡದ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ಇದನ್ನ ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಮುಖ್ಯಮಂತ್ರಿ ಬೊಮ್ಮಯಿ ಅವರಿಗೆ ಎಂಇಎಸ್ ಬ್ಯಾನ್ ಮಾಡಲು ಒಂದು ವಾರದ ಗಡುವು ನೀಡಿದ ವಾಟಾಳ ನಾಗರಾಜ, ಎಂಇಎಸ್ ಬ್ಯಾನ್ ಮಾಡಿದರೆ ಕರ್ನಾಟಕ ಬಂದ್ ವಾಪಸ್ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳೇ ಇನ್ನೊಂದು ವಾರದ ಗಡವು ಕೊಡುತ್ತೇವೆ. ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದೀರಿ, ನಿಮ್ಮ ಮೇಲೆ ಗೌರವ ಹಾಗೂ ನಂಬಿಕೆ ಇದೆ. ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳಿ ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ