ಕೊರೊನಾ ರೂಪಾಂತರ ಹೆಚ್ಚಾಗಲಿದೆ, ಸಂಕ್ರಾಂತಿಯೊಳಗೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಅವಘಡದ ಸಂಭವವಿದೆ : ಕೋಡಿಮಠದ ಶ್ರೀಗಳ ಭವಿಷ್ಯ

ರಾಣೆಬೆನ್ನೂರು: ಸಂಕ್ರಾಂತಿಯೊಳಗೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ರಾಜಕೀಯ ಅವಘಡ ಸಂಭವಿಸಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗೀಂದ್ರಶ್ರೀ ಭವಿಷ್ಯ ನುಡಿದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ರೂಪಾಂತರ ಹೆಚ್ಚುವ ಲಕ್ಷಣಗಳಿವೆ. ಸಂಶಯ, ಅಸಹನೆ, ದ್ವೇಷ, ರಾಜಕೀಯ ಕಲಹ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ನಾಣು ಈ ಹಿಂದೆ ದೇಶದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ ಎಂದು ಹೇಳಿದ್ದೆ. ಭಾಋತೀಯ ಸೇನೆ ಸಿಬ್ಬಂದಿ ಮುಖ್ಯಸ್ಥರ ಹೆಲಿಕಾಪ್ಟರ್‌ ದುರಂತ ನಡೆದುಹೋಯಿತು. ಈಗ ಬರುವ ಸಂಕ್ರಾಂತಿಯೊಳಗೆ ರಾಷ್ಟರಮಟ್ಟದಲ್ಲಿ ಮತ್ತೊಂದು ಅವಘಡ ಸಂಭವಿಸುವ ಲಕ್ಷಣಗಳಿವೆ ಎಂದರು.
ಕೊರೊನಾ ರೂಪಾಂತರ ಹೆಚ್ಚಾಗುವ ಸಂಭವವಿದೆ. ಅಲ್ಲದೆ, ದೇಶದಲ್ಲಿ ಅಸಹನೆ, ದ್ವೇಷ, ರಾಜಕೀಯ ಕಲಹ ಹೆಚ್ಚಾಗಲಿದೆ. ಮತ್ತೆ ಕೆಲವು ದಿನಗಳಲ್ಲಿ ಮಳೆಯಾಗುವ ಲಕ್ಷಣಗಳಿವೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.

 

.

4 / 5. 1

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

ನಿಮ್ಮ ಕಾಮೆಂಟ್ ಬರೆಯಿರಿ

advertisement