ಬಿಎಂಟಿಸಿ ಸಾರಿಗೆ ಸಂಸ್ಥೆ ಖಾಸಗೀಕರಣವಿಲ್ಲ

ಸುವರ್ಣಸೌಧ(ಬೆಳಗಾವಿ): ಬೆಂಗಳೂರು ನಗರ ಸಾರಿಗೆ ಬಿಎಂಟಿಸಿ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿಧಾನ ಪರಿಷತ್ತಿನ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಸದಸ್ಯ ಮುನಿರಾಜು ಗೌಡ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿದ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು
ಖಾಸಗೀಕರಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.
೨೦೧೭-೧೮ನೇ ಸಾಲಿನ ಆಯವ್ಯಯ ಅನ್ವಯ ಆಸಲು ಮತ್ತು ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಬಿಎಂಟಿಸಿಗೆ ೧೫೦೦ ಡೀಸೆಲ್ ಬಸ್ ಗಳನ್ನು ಖರೀದಿಸಲು ರಾಜ್ಯ ಸರ್ಕಾರ ಘೋಷಿಸಿದ ಅನುದಾನದಲ್ಲಿ ೮೫೭ ಬಸ್ಸುಗಳನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ೬೪೩ ಬಸ್ಸುಗಳನ್ನು ಖರೀದಿಸಲು ಟೆಂಡರ್ ಅಂತಿಮಗೊಳಿಸದ್ದು, ಅನುದಾನ ಲಭ್ಯತೆಗೆ ಅನುಗುಣವಾಗಿ ೫೬೫ ಹವಾನಿಯಂತ್ರಿತವಲ್ಲದ ಸಾಧರಣ ವಾಹನಗಳನ್ನು ಮಾತ್ರ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಒಟ್ಟು ೭೩೩ ಕೋಟಿ ಸಾಲ ಪಡೆಯಲಾಗಿದೆ. ೧೯೫ ಕೋಟಿ ರೂ. ಮರು ಪಾವತಿ ಮಾಡಲಾಗಿದೆ ಎಂದ ಅವರು, ಸಾರಿಗೆ ಸಂಸ್ಥೆಗಳ ಹಳೆಯ ಬಸ್ಸು ೮ ಲಕ್ಷ ಕಿ.ಮೀ ಅಥವಾ ೧೧ ವರ್ಷದ ಬಳಿಕ ಒಳಗೊಂಡಂತೆ ಯಾವುದು ಮೊದಲೂ ಅದನ್ನು ವಿಲೇವಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement