9ನೇ ಡೋಸ್​ ಲಸಿಕೆ ಪಡೆಯುವ ವೇಳೆ ಸಿಕ್ಕಿಬಿದ್ದ ವ್ಯಕ್ತಿ….!

ವಿಶ್ವದಲ್ಲಿ ಮೂರನೇ ಡೋಸ್​ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ ಬೆಲ್ಜಿಯಂನಲ್ಲಿ ಅತ್ಯಂತ ವಿಚಿತ್ರ ಪ್ರಕರಣ ನಡೆದಿದೆ. ಬೆಲ್ಜಿಯಂನ ಚಾರ್ಲೆರಾಯ್ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ 9ನೇ ಡೋಸ್​ ಲಸಿಕೆ ಪಡೆಯುತ್ತಿದ್ದ ವೇಳೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ .
ಸುಳ್ಳು ದಾಖಲೆಗಳನ್ನು ನೀಡಿ ತನ್ನ ಒಂಬತ್ತನೇ ಕೋವಿಡ್​ 19 ಲಸಿಕೆ ಸ್ವೀಕರಿಸಲು ಯತ್ನಿಸುತ್ತಿದ್ದ ವೇಳೆಯಲ್ಲಿ ಪೊಲೀಸರ ಕೈಗೆ ಈತ ಸಿಕ್ಕಿಬಿದ್ದಿದ್ದಾನೆ, ಕೊರೊನಾ ಲಸಿಕೆಯನ್ನು ಪಡೆಯದವರ ಪರವಾಗಿ ಈತ ಕೋವಿಡ್​ ಲಸಿಕೆಯನ್ನು ಪಡೆಯುತ್ತಿದ್ದ ಎನ್ನಲಾಗಿದೆ. ಇದಕ್ಕಾಗಿ ಆತ ಅವರಿಂದ ಹಣವನ್ನೂ ಪಡೆಯುತ್ತಿದ್ದ ಎನ್ನಲಾಗಿದೆ.
ಈತ ಪದೇ ಪದೇ ಲಸಿಕೆಯನ್ನು ಸ್ವೀಕರಿಸಲು ಲಸಿಕಾ ಕೇಂದ್ರಕ್ಕೆ ಬರುತ್ತಿದ್ದುದನ್ನು ಆರೋಗ್ಯ ಸಿಬ್ಬಂದಿ ಮೊದಲು ಗಮನಿಸಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲ ಹೆಚ್ಚುವರಿ ಡೋಸ್​ ಲಸಿಕೆ ಪಡೆದ ಬಳಿಕವೂ ಈತನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓಮಿಕ್ರಾನ್​ ಹರಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಬೆಲ್ಜಿಯಂ ಕೋವಿಡ್​ 19 ಸಂಬಂಧ ಹೊಸ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಒಳಾಂಗಣ ಮಾರ್ಕೆಟ್​, ಚಿತ್ರಮಂದಿರ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಪ್ರದೇಶವನ್ನು ಬಂದ್​ ಮಾಡಲಾಗಿದೆ. ಪ್ರೇಕ್ಷಕರಿಲ್ಲದೇ ಕ್ರೀಡಾ ಚಟುವಟಿಕೆಗಳನ್ನು ನಡೆಸುವಂತೆ ಹೇಳಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement