ನವದೆಹಲಿ: ಲುಧಿಯಾನ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯನ್ನು ವಜಾಗೊಂಡ ಪೊಲೀಸ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಗನ್‌ದೀಪ್ ಎಂಬವರನ್ನು ಪೊಲೀಸ್ ಇಲಾಖೆಯಿಂದ ವಜಾಗೊಳಿಸಲಾಯಿತು, ಇದು ಅವನ ಮತ್ತು ಅವನ ಹೆಂಡತಿಯ ನಡುವೆ ಮನಸ್ತಾಪಕ್ಕೆ ಕಾರಣವಾಯಿತು. ಬಳಿಕ ಾತ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾಗಿದೆ.
ಮೂಲಗಳ ಪ್ರಕಾರ, ಸ್ಫೋಟದ ವೇಳೆ ಗಗನ್‌ದೀಪ್ ಮೊಬೈಲ್ ಫೋನ್ ಸ್ಫೋಟಗೊಂಡಿದೆ. ಆದರೆ ಗಗನ್‌ದೀಪ್ ಡೊಂಗಲ್ ಹೊಂದಿದ್ದು, ಅದರ ಮೂಲಕ ಇಂಟರ್ನೆಟ್ ಬಳಸುತ್ತಿದ್ದ ಎನ್ನಲಾಗಿದೆ.
ಬಾಂಬ್ ಜೋಡಿಸುವ ಮತ್ತು ಸಕ್ರಿಯಗೊಳಿಸುವ ಬಗ್ಗೆ ಗಗನ್‌ದೀಪ್ ಆನ್‌ಲೈನ್‌ನಲ್ಲಿ ಯಾರೊಬ್ಬರಿಂದ ಮಾಹಿತಿ ಪಡೆಯುತ್ತಿದ್ದ ಎಂದು ಎನ್‌ಐಎ ಮತ್ತು ಪಂಜಾಬ್ ಪೊಲೀಸರು ಶಂಕಿಸಿದ್ದಾರೆ.
ಅದೇ ಇಂಟರ್ನೆಟ್ ಡೊಂಗಲ್‌ನ ಸಿಮ್ ಆಧಾರದ ಮೇಲೆ ಗಗನ್‌ದೀಪ್‌ನನ್ನು ಗುರುತಿಸಲಾಯಿತು ಮತ್ತು ನಂತರ ಕುಟುಂಬದವರು ಅವನ ಹಚ್ಚೆ ನೋಡಿ ಮೃತ ದೇಹವನ್ನು ಗುರುತಿಸಿದ್ದಾರೆ. ಪಂಜಾಬ್‌ನ ಲುಧಿಯಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ನಡೆದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.
ಡಿಸೆಂಬರ್ 23 ರಂದು ಮಧ್ಯಾಹ್ನ 12:22 ರ ಸುಮಾರಿಗೆ ಲುಧಿಯಾನದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಸಮೀಪದ ಕಟ್ಟಡಗಳು ನಡುಗಿದವು. ಗೋಡೆಗಳು ಮತ್ತು ಗಾಜಿನ ಕಿಟಕಿಗಳು ಒಡೆದು ಹೋಗಿದ್ದರಿಂದ ಕಟ್ಟಡದ ಹಲವು ಭಾಗಗಳಿಗೆ ಹಾನಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ