ಅಪರೂಪದ ಘಟನೆಯಲ್ಲಿ ಎರಡು ಸಿಂಹಗಳನ್ನು ಬೆದರಿಸಿ ಓಡಿಸಿ ಜೀವ ಉಳಿಸಿಕೊಂಡ ಗೂಳಿ…! ಈ ದೃಶ್ಯ ವಿಡಿಯೊದಲ್ಲಿ ಸೆರೆ

ಬಹಳ ಅಪರೂಪದ ಘಟನೆಯೊಂದರಲ್ಲಿ ಗೂಳಿಯೊಂದು ಎರಡು ಸಿಂಹಿಗಳನ್ನೇ ಹೆದರಿಸಿ ಓಡಿಸಿದೆ. ಈ ಅಪರೂಪದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊದಲ್ಲಿ ಎರಡು ಹೆಣ್ಣು ಸಿಂಹಗಳು ರಾತ್ರಿ ಹೊತ್ತು ಊರಿನೊಳಗೆ ಬರುವುದನ್ನು ಕಾಣಬಹುದು.. ಹೊರಗೆ ಕಟ್ಟಿ ಹಾಕಿದ್ದ ಗೂಳಿಯನ್ನು ನೋಡಿ ಅದರ ಮೇಲೆ ದಾಳಿ ಮಾಡಲು ಬಂದಿದ್ದವು… ಆದರೆ, ಗೂಳಿಯ ಧೈರ್ಯದ ಮುಂದೆ ಇವುಗಳ ಆಟ ನಡೆಯಲಿಲ್ಲ ಎಂಬುದನ್ನು ವಿಡಿಯೊದಲ್ಲಿ ನೋಡಬಹುದು..!
ವನ್ಯಜೀವಿಗಳು ಜನವಸತಿ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲಿರುತ್ತವೆ. ಜನವಸತಿ ವಿಸ್ತಾರವಾಗುತ್ತಿದ್ದಂತೆಯೇ ತಮ್ಮ ಆವಾಸ ಸ್ಥಾನಗಳನ್ನು ಕಾಡುಮೃಗಗಳು ಕಳೆದುಕೊಳ್ಳುತ್ತಿವೆ. ಪರಿಣಾಮ ಅವುಗಳು ಊರಿನೊಳಗೆ ನುಗ್ಗುತ್ತವೆ. ಇಂಥದ್ದೇ ಘಟನೆಯೊಂದರಲ್ಲಿ ಎರಡು ಹೆಣ್ಣು ಸಿಂಹಗಳು ರಾತ್ರಿ ಹೊತ್ತು ಜನವಸತಿ ಪ್ರದೇಶಕ್ಕೆ ಬಂದಿದ್ದವು. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎರಡು ಸಿಂಹಿಣಿಯರು ಸಾಗುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಆರಂಭವಾಗುತ್ತದೆ. ಈ ಹೆಣ್ಣು ಸಿಂಹಗಳಿಗೆ ಮನೆಯ ಬದಿಗೆ ಕಟ್ಟಿ ಹಾಕಿರುವ ಗೂಳಿಯೊಂದು ಕಾಣಿಸುತ್ತದೆ. ಈ ಗೂಳಿ ಕಂಡ ತಕ್ಷಣ ಅದರ ಮೇಲೆ ದಾಳಿ ಮಾಡಲು ಹೆಣ್ಣು ಸಿಂಹಗಳು ಮುಂದಾಗಿವೆ. ಆದರೆ, ಸಿಂಹಗಳನ್ನು ಕಂಡ ತಕ್ಷಣ ಹೆದರದ ಗೂಳಿ ಎರಡು ಸಿಂಹಗಳ ವಿರುದ್ಧ ಕದನಕ್ಕೆ ನಿಂತಿದೆ. ತನ್ನನ್ನು ಕಟ್ಟಿಹಾಕಿದಲ್ಲಿಂದಲೇ ಕೊಂಬಿನಿಂದ ತಿವಿಯುವುದು ಹಾಗೂ ಹಾಯುವುದನ್ನು ಮಾಡುತ್ತಿತ್ತು. ಹೀಗಿದ್ದರೂ ಈ ಸಿಂಹಗಳು ಗೂಳಿ ಹಿಡಿಯಲು ಪ್ರಯತ್ನ ನಡೆಸಿತ್ತು. ಆದರೆ ಗೂಳಿ ಹೆದರದೆ ಧೈರ್ಯದಿಂದ ಎದುರಿಸಿತು. ಸಿಂಹಗಳು ಎಷ್ಟು ಪ್ರಯತ್ನಿಸಿದರೂ ಗೂಳಿ ಅವುಗಳನ್ನು ಯಡೆಯುವಲ್ಲಿ ಯಶಸ್ವಿಯಾಗಿತ್ತು.

ಪರಿಣಾಮ, ಈ ಕಾಡುಮೃಗಗಳು ಅಲ್ಲಿಂದ ಜಾಗ ಖಾಲಿ ಮಾಡಿದವು. ಗೂಳಿ ಬದುಕಿದೆಯಾ ಬಡಜೀವವೇ ಎಂದಿತು. ಈ ಅಪರೂಪದಲ್ಲಿ ಅಪರೂಪದ ವಿಡಿಯೊವನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಭಾರೀ ವೈರಲ್‌ ಆಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement