ಗಾಳಿಪಟ ಹಾರಿಸುವಾಗ ಪಟದೊಂದಿಗೆ ಗಾಳಿಯಲ್ಲಿ ಹಾರಿಹೋದ ವ್ಯಕ್ತಿ…! ವೀಕ್ಷಿಸಿ

ವ್ಯಕ್ತಿಯೊಬ್ಬರು ಗಾಳಿಪಟದ ದಾರದೊಂದಿಗೆ ಹಾರಿಹೋಗಿ ಕೆಲ ಸಮಯ ಗಾಳಿಯಲ್ಲಿ ಹಾರಾಡಿ ನಂತರ ನೆಲಕ್ಕೆ ಬಿದ್ದ ವಿಡಿಯೋ ವೈರಲ್​ ಅಗಿದೆ. ವ್ಯಕ್ತಿ ಗಾಳಿಪಟ ಹಾರಿಸುತ್ತಿದ್ದಾಗ ಸೆಣಬಿನ ದಾರ ಹಿಡಿದುಕೊಂಡಿದ್ದ. ಆದರೆ ಗಾಳಿ ಬಲವಾಗಿ ಬೀಸಿದ ಕಾರಣ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಹಾರಿಹೋದ ವಿಚಿತ್ರ ಘಟನೆ ನಡೆದಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದ್ದು, ಈ ಉಸಿರು ಬಿಗಿಹಿಡಿಯುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಿಡಿಯೊದಲ್ಲಿ ಗಾಳಪಟದ ಹಗ್ಗ ಹಿಡಿದ ವ್ಯಕ್ತಿ ತೂಗಾಡುತ್ತಿರುವುದು ಕಾಣಬಹುದು. ವರದಿಯ ಪ್ರಕಾರ, ಸೆಣಬಿನ ದಾರದಲ್ಲಿ ಗಾಳಿಪಟವನ್ನು ಕಟ್ಟಲು ವ್ಯಕ್ತಿ ದಾರವನ್ನು ಹಿಡಿದುಕೊಂಡಿದ್ದರು. ಆದರೆ ಅವನ ಹಿಂದೆ ನಿಂತಿದ್ದ ಕೆಲವು ಹುಡುಗರು ದಾರವನ್ನು ಕೈಬಿಟ್ಟಿದ್ದಾರೆ. ಅದೇ ವೇಳೆಗೆ ಗಾಳಿ ಜೋರಾಗಿ ಬೀಸಿದೆ ಇದರಿಂದ ಹಗ್ಗದ ಜೊತೆಗೆ ವ್ಯಕ್ತಿಯೂ ಹಾರಿಹೋಗಿದ್ದಾನೆ. ಗಾಬರಿಗೊಂಡ ಹುಡುಗರು ಕೆಳಗಿರುವ ದಾರವನ್ನು ಹಿಡಿದು ಎಳೆದು ಮರಕ್ಕೆ ಕಟ್ಟಿದ್ದಾರೆ. ನಂತರ ದಾರ ಹಿಡಿದಿದ್ದ ವ್ಯಕ್ತಿ ನಿಧಾನವಾಗಿ ಕೆಳಗೆ ಬಂದಿದ್ದಾನೆ. ಆದರೆ ಪೂರ್ತಿಯಾಗಿ ದಾರ ಕೆಳಗೆ ಬರುವ ಮೊದಲೇ ವ್ಯಕ್ತಿ ದಾರವನ್ನು ಬಿಟ್ಟಿದ್ದರಿಂದ ನೆಲಕ್ಕೆ ಬಿದ್ದಿದ್ದಾರೆ. ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದೆ. ಭಯಾನಕ ವಿಡಿಯೋ ನೋಡಿ ನೆಟ್ಟಿಗರು ಕೂಡ ಗಾಬರಿಯಾಗಿದ್ದಾರೆ. ಆಕಸ್ಮಾತ್‌ ಆಗಿ ನಡೆದ ಘಟನೆಯ ಈ ವಿಡಿಯೊ ವಿಶ್ವದಾದ್ಯಂತ ವೀಡಿಯೋ ವೈರಲ್​ ಆಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement