ಕರ್ನಾಟಕ ಬಿಜೆಪಿಯಲ್ಲಿಇನ್ನಷ್ಟು ಪದಾಧಿಕಾರಿಗಳ ನೇಮಕ, ಡಿಸಿಎಂ ಸ್ಥಾನ ಕಳೆದುಕೊಂಡಿದ್ದ ಲಕ್ಷ್ಮಣ ಸವದಿಗೆ ಮಹತ್ವದ ಹುದ್ದೆ

ಬೆಂಗಳೂರು: ಕರ್ನಾಟಕ ಬಿಜೆಪಿ ಮತ್ತಷ್ಟು ಪದಾಧಿಕಾರಿಗಳನ್ನ ನೇಮಕ ಮಾಡಿದೆ. ಪಕ್ಷದ ಉಪಾಧ್ಯಕ್ಷ ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಭಾರಿ, ಸಂಚಾಲಕರನ್ನ ನೇಮಿಸಿದೆ.
ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಲಕ್ಷ್ಮಣ ಸವದಿ ಹಾಗೂ ನಯನಾ ಗಣೇಶ ಅವರನ್ನು ನೇಮಕ ಮಾಡಲಾಗಿದೆ.
ಅನಿವಾಸಿ ಭಾರತೀಯ ವಿಭಾಗದ ರಾಜ್ಯ ಸಂಚಾರಲಕರಾಗಿ ಕ್ಯಾ. ಗಣೇಶ ಕಾರ್ಣಿಕ, ಪ್ರಕೋಷ್ಠಗಳ ರಾಜ್ಯ ಸಹ-ಸಂಯೋಜಕರಾಗಿ ಹುಬ್ಬಳ್ಳಿಯ ಜಯತೀರ್ಥ ಕಟ್ಟಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾರಲಕರಾಗಿ ಬೆಂಗಳೂರಿನ ಹೆಚ್ ಯೋಗೇಂದ್ರ, ಸಹ ಸಂಚಾಲಕರಾಗಿ ಬೆಳಗಾವಿಯ ವಿನೋದ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕರಾಗಿ ಅಂಕೋಲಾದ ಗೋವಿಂದ ಬಾಂಡೇಕರ, ಸಹ ಸಂಚಾಲಕರಾಗಿ ಮುಧೋಳದ ನಾಗಬ್ಬ ಅಂಬಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಕಲಬುರ್ಗಿಯ ಬಸವರಾಜ ಮತ್ತೀಮೋಡ ಅವರನ್ನು ನೇಮಕ ಮಾಡಲಾಗಿದೆ.
ಮಂಡ್ಯಾ ಜಿಲ್ಲಾ ಪ್ರಭಾರಿಯಾಗಿ ಬೆಂಗಳೂರಿನ ಜಗದೀಶ ಹಿರೇಮನಿ, ಯಾದಗಿರಿ ಜಿಲ್ಲಾ ಪ್ರಭಾರಿಯಾಗಿ ಕಲಬುರ್ಗಿಯ ಅಮರನಾಥ ಪಾಟೀಲ, ದಾವಣಗೆರೆ ಜಿಲ್ಲಾ ಪ್ರಭಾರಿಯಾಗಿ ಕಾಣೇಬೆನ್ನೂರಿನ ಶಿವಲಿಂಗಪ್ಪ ಕೆ, ಚಿತ್ರದುರ್ಗ ಜಿಲ್ಲಾ ಪ್ರಭಾರಿಯಾಗಿ ಚಿಕ್ಕಮಗಳೂರಿನ ಸಿ.ಆರ್.ಪ್ರೇಮಕುಮಾರ, ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರಿಯಾಗಿ ಆನೇಕಲ್ ನ ಕೆ.ವಿ.ಶಿವಪ್ಪ ಅವರನ್ನು ನೇಮಕ ಮಾಡಲಾಗಿದೆ.
ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮುರಹರಗೌಡ ಹಾಗೂ ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೊಡ್ಲಿಗಿಯ ಚನ್ನಬಸವನಗೌಡ ಅವನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಆದೇಶಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement