ಪಂಜಾಬಿ​​ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ 200 ಕೋಟಿ ರೂ.ಗಳ ಮೌಲ್ಯದ ಹೆರಾಯಿನ್ ವಶ ಪಡಿಸಿಕೊಂಡ ಬಿಎಸ್​​ಎಫ್

ಫಿರೋಜ್​​ಪುರ್: ಗಡಿ ಭದ್ರತಾ ಪಡೆ ಭಾನುವಾರ ಫಿರೋಜ್‌ಪುರ್​​ ಸೆಕ್ಟರ್‌ನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 200 ಕೋಟಿ ಮೌಲ್ಯದ 40 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ಪ್ರದೇಶದಲ್ಲಿ 10 ಕೆಜಿಗೂ ಹೆಚ್ಚು ವಸ್ತುವನ್ನು ವಶಪಡಿಸಿಕೊಂಡ ಒಂದು ದಿನದ ನಂತರ ಇಷ್ಟೊಂದು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಭಾನುವಾರದ ಮೊದಲ ಪ್ರಕರಣದಲ್ಲಿ, 101 ಬೆಟಾಲಿಯನ್‌ ಸೈನಿಕರು ಗಡಿ ಹೊರಠಾಣೆ ಮಿಯಾನ್ ವಾಲಿ ಉತ್ತರ ಬಳಿ 34 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 170 ಕೋಟಿ ರೂ.ಎಂದು ಅಂದಾಜಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ 116 ಬೆಟಾಲಿಯನ್‌ನ ಸಿಬ್ಬಂದಿ ಗಡಿ ಹೊರಠಾಣೆ ಮೊಹಮ್ಮದಿ ವಾಲಾ ಬಳಿ 30 ಕೋಟಿ ಮೌಲ್ಯದ 6 ಕೆಜಿ ಹೆರಾಯಿನ್ ವಶಪಡಿಸಿದ್ದಾರೆ. ಶನಿವಾರ, 136 ಬೆಟಾಲಿಯನ್‌ಗೆ ಸೇರಿದ ಸೈನಿಕರು ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಬ್ಯಾರೆಕೆ ಬಳಿ 10.852 ಕೆಜಿ ತೂಕದ 11 ಹೆರಾಯಿನ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರು ಪಂಜಾಬ್‌ನಲ್ಲಿ ಡ್ರಗ್ಸ್ ವಿತರಿಸುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮವನ್ನು ಪ್ರಾರಂಭಿಸಿದೆ ಎಂದು ಹೇಳಿದ್ದರು. ಲುಧಿಯಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನಿ, ಪಂಜಾಬ್‌ನಲ್ಲಿ ಡ್ರಗ್ಸ್ ಹರಡಿದವರ ವಿರುದ್ಧ ಕ್ರಮ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement