14 ತಿಂಗಳ ಬಳಿಕ ಮಾಲೀಕನ ಕರೆಗೆ ಓಡೋಡಿ ಬಂದ ಆನೆಗಳ ಹಿಂಡು…! ಹೃದಯ ಸ್ಪರ್ಶಿ ವಿಡಿಯೊ ವೈರಲ್‌

ಪ್ರಾಣಿಗಳ ಪ್ರೀತಿ ನಿಷ್ಕಲ್ಮಷ. ಅದರಲ್ಲಿಯೂ ನಾಯಿ, ಆನೆ ಮೊದಲಾದ ಪ್ರಾಣಿಗಳು ತಮ್ಮನ್ನು ಸಾಕಿದ ಮಾಲೀಕರಿಗೆ ವಿಧೇಯರಾಗಿ, ಅವರ ಪ್ರೀತಿಗೆ, ಕಾಳಜಿಗೆ ತಮ್ಮದೇ ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸುತ್ತವೆ. ಈಗ ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ.
14 ತಿಂಗಳ ಬಳಿಕ ತಮ್ಮ ಮಾಲೀಕನ ಕಂಡ ಆನೆಗಳು ಆತನ ಪ್ರೀತಿಯ ಕರೆಗೆ ಸ್ಪಂದಿಸಿ ಓಡೋಡಿ ಬರುವ ಆನೆಗಳ ಆನೆಗಳ ಹಿಂಡು ಆತನನ್ನು ಸುತ್ತುವರೆದು ಮುದ್ದಿಸಿದ ಹೃದಯಸ್ಪರ್ಶಿ ವೀಡಿಯೋ ವೈರಲ್​​ ಆಗಿದೆ. ಆನೆಗಳಿಗೆ 14 ತಿಂಗಳ ಬಳಿಕವೂ ತಮ್ಮ ಹಳೆಯ ಮಾಲೀಕನ ಮೇಲಿರುವ ಪ್ರೀತಿ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋದಲ್ಲಿ ನೀರಿನ ಮಧ್ಯದಲ್ಲಿ ಆನೆಗಳ ಹಳೆ ಮಾಲೀಕ ನಿಂತು ಆನೆಗಳನ್ನು ಕರೆಯುತ್ತಾನೆ. ದೂರದಲ್ಲಿರುವ ಆನೆಗಳು ಆತನನ್ನು ಧ್ವನಿ ಕೇಳಿ ನೀರಿನಲ್ಲಿಯೇ ಓಡೋಡಿ ಬರುತ್ತವೆ. ಮೂರು ಆನೆಗಳು ವ್ಯಕ್ತಿಯನ್ನು ಸುತ್ತುವರೆದು ಮುದ್ದಿಸುತ್ತವೆ. ಆನೆಗಳು ತಮ್ಮದೇ ರೀತಿಯಲ್ಲಿ ಮಾಲೀಕನನ್ನು ಮುದ್ದಿಸುವ ಕ್ಯೂಟ್​ ವೀಡಿಯೋ ಈಗ ನೋಡುಗರ ಮನ ಗೆದ್ದಿದೆ. ನೆದರ್​ಲ್ಯಾಂಡ್​ನ ಟ್ವಿಟರ್​​ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು 3 ಮಿಲಿಯನ್​ ಗೂ ಅಧಿಕ ವೀಕ್ಷಣೆ ಪಡೆದಿದೆ.
ವಿಡಿಯೊದಲ್ಲಿರುವ ವ್ಯಕ್ತಿಯನ್ನು ಡೆರೆಕ್​ ಥಾಂಪ್ಸನ್​ ಎಂದು ಹೇಳಲಾಗಿದೆ. ಅವರು ಟೊರೆಂಟೋದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಾಗಿದ್ದರು ಎನ್ನಲಾಗಿದೆ. ಇವರು ತಮ್ಮ ವೃತ್ತಿ ಜೀವನದಲ್ಲಿ ಆನೆಗಳ ಆರೈಕೆ ಮಾಡಿಯೇ ಹೆಚ್ಚು ಪರಿಚಿತರು ಎಂದು ಬಳಕೆದಾರೊಬ್ಬರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ
https://twitter.com/buitengebieden_/status/1474125263554424837?ref_src=twsrc%5Etfw%7Ctwcamp%5Etweetembed%7Ctwterm%5E1474125263554424837%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Ftrending%2Felephants-reunits-with-care-taker-after-14-months-video-goes-viral-pvd-313761.html

3.8 / 5. 4

ನಿಮ್ಮ ಕಾಮೆಂಟ್ ಬರೆಯಿರಿ

advertisement