15-18 ವರ್ಷ ವಯಸ್ಸಿನವರು ಜನವರಿ 1ರಿಂದ ಕೊ-ವಿನ್ (CoWIN )ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು..ಮಾಹಿತಿ ಇಲ್ಲಿದೆ..

ನವದೆಹಲಿ: ಸರ್ಕಾರವು 15-18 ವರ್ಷ ವಯಸ್ಸಿನವರಿಗೆ ಜನವರಿ 3 ರಿಂದ ಕೋವಿಡ್‌ ಲಸಿಕೆಗಳನ್ನು ನೀಡಲು ಸಜ್ಜಾಗಿದ್ದು, ಜನವರಿ 1 ರಿಂದ CoWIN ಆ್ಯಪ್‌ನಲ್ಲಿ 15-18 ವರ್ಷ ವಯಸ್ಸಿನವರಿಗೆ ನೋಂದಾವಣೆ ಸಾಧ್ಯವಾಗಲಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ CoWIN ಪ್ಲಾಟ್‌ಫಾರ್ಮ್ ಮುಖ್ಯಸ್ಥ ಡಾ.ಆರ್.ಎಸ್.ಶರ್ಮಾ ಸೋಮವಾರ ಈ ಬಗ್ಗೆ ತಿಳಿಸಿದ್ದು, CoWIN ಪೋರ್ಟಲ್‌ನಲ್ಲಿ ನೋಂದಾಯಿಸಲು, ಮಕ್ಕಳು 10ನೇ ತರಗತಿಯ ಗುರುತಿನ ಚೀಟಿಯನ್ನು ಬಳಸಬಹುದು ಏಕೆಂದರೆ ಅವರಲ್ಲಿ ಕೆಲವರು ಆಧಾರ್ ಅಥವಾ ಇತರ ಗುರುತಿನ ಚೀಟಿಗಳನ್ನು ಹೊಂದಿಲ್ಲದಿರಬಹುದು ಎಂದು ಅವರು ಹೇಳಿದರು.
ನಾವು ನೋಂದಣಿಗಾಗಿ ಹೆಚ್ಚುವರಿ (10 ನೇ ತರಗತಿ) ಗುರುತಿನ ಚೀಟಿ ಸೇರಿಸಿದ್ದೇವೆ. ಯಾಕೆಂದರೆ ಕೆಲವು ವಿದ್ಯಾರ್ಥಿಗಳು ಆಧಾರ್ ಅಥವಾ ಇತರ ಗುರುತಿನ ಕಾರ್ಡ್‌ಗಳನ್ನು ಹೊಂದಿಲ್ಲದಿರಬಹುದು ಎಂದು ಅವರು ಹೇಳಿದ್ದಾರೆ.15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ವಿರುದ್ಧ ಲಸಿಕೆಯನ್ನು ಜನವರಿ 3 ರಿಂದ ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಎರಡು ದಿನಗಳ ನಂತರ ನೋಂದಣಿ ಪ್ರಕ್ರಿಯೆಯ ಮಾಹಿತಿಯನ್ನು ಪ್ರಕಟಿಸಲಾಗಿದೆ.
ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ “ಮುನ್ನೆಚ್ಚರಿಕೆ ಡೋಸ್” (ಬೂಸ್ಟರ್‌ ಡೋಸ್)‌ ಅನ್ನು ಜನವರಿ 10ರಿಂದ ನೀಡಲಾಗುತ್ತದೆ. ವೈರಸ್‌ನ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿರುವ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ಕೇಂದ್ರ ಸರ್ಕಾರದಿಂದ ನಿರ್ಧಾರಗಳು ಬಂದಿವೆ..
ಮುಂದಿನ ವರ್ಷ ಜನವರಿ 10 ರಿಂದ ವೈದ್ಯರ ಸಲಹೆಯ ಮೇರೆಗೆ ಕೊಮೊರ್ಬಿಡಿಟಿ ಇರುವ 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಬೂಸ್ಟರ್‌ ಡೋಸ್ ಲಭ್ಯವಿರುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
“ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಏಕೈಕ ಕೋವಿಡ್‌-19 ಲಸಿಕೆಯಾಗಿದ್ದು, ಇದೀಗ 15-18 ವರ್ಷ ವಯಸ್ಸಿನ ಮಕ್ಕಳಿಗೆ ಜನವರಿ 3 ರಿಂದ ಚುಚ್ಚುಮದ್ದು ನೀಡಲಾಗುತ್ತದೆ. ಈ ವರ್ಗಕ್ಕೆ ಒಳಪಡುವ ಅಂದಾಜು ಜನಸಂಖ್ಯೆಯು ಏಳರಿಂದ ಎಂಟು ಕೋಟಿ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆರಂಭಿಕ ವರದಿಗಳ ಪ್ರಕಾರ ಕೊವಿನ್ ಅಪ್ಲಿಕೇಶನ್‌ನಲ್ಲಿ ಮಕ್ಕಳ ನೋಂದಣಿ ವೇದಿಕೆಯು ವಯಸ್ಕರ ನೋಂದಣಿ ವೇದಿಕೆಗೆ ಹೋಲುತ್ತದೆ. 15-18 ವರ್ಷದೊಳಗಿನ ಮಕ್ಕಳು CoWIN ಆ್ಯಪ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು ಅಥವಾ ಯಾವುದೇ ಲಸಿಕೆ ಕೇಂದ್ರಕ್ಕೆ ತೆರಳಲು ಮತ್ತು ಅಗತ್ಯ ಪೋಷಕ ದಾಖಲೆಗಳನ್ನು ಒದಗಿಸಿದ ನಂತರ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.ಹೊಸ ವ್ಯಾಕ್ಸಿನೇಷನ್ ವರ್ಗವನ್ನು ನೋಂದಾಯಿಸಲು CoWIN ಪೋರ್ಟಲ್‌ನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ.
ನೀವು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದರೆ ಮತ್ತು ಎರಡನೇ ಡೋಸ್ ಮತ್ತು ನೀವು ನೋಂದಾಯಿಸುವ ದಿನದ ನಡುವಿನ ಅಂತರವು 9 ತಿಂಗಳುಗಳಿಗಿಂತ ಹೆಚ್ಚು (39 ವಾರಗಳು) ಆಗಿದ್ದರೆ ನೀವು ಅರ್ಹರಾಗಿದ್ದೀರಿ” ಎಂದು ಶರ್ಮಾ ಬೂಸ್ಟರ್‌ ಡೋಸ್ ಕುರಿತು ಹೇಳಿದರು.
ನೋಂದಾಯಿಸುವಾಗ, ಹಿರಿಯ ನಾಗರಿಕರಿಗೆ ಯಾವುದೇ ಕೊಮೊರ್ಬಿಡಿಟಿಗಳಿವೆಯೇ ಅಥವಾ ಇಲ್ಲವೇ ಎಂದು COWIN ಅಪ್ಲಿಕೇಶನ್ ಕೇಳುತ್ತದೆ. ನೀವು ಹೌದು ಎಂದು ಹೇಳಿದರೆ, ನೀವು ನೋಂದಾಯಿಸಲು ಸಾಧ್ಯವಾಗುತ್ತದೆ ಮತ್ತು ಲಸಿಕೆ ಕೇಂದ್ರದಲ್ಲಿ ನೋಂದಾಯಿತ ವೈದ್ಯರಿಂದ ಕೊಮೊರ್ಬಿಡಿಟೀಸ್ ಪ್ರಮಾಣಪತ್ರವನ್ನು ತೋರಿಸಿದ ನಂತರ ನೀವು ಬೂಸ್ಟರ್‌ ಡೋಸ್‌ ಪಡೆಯಬಹುದು ಎಂದು ಶರ್ಮಾ ಹೇಳಿದರು.
ಕರ್ನಾಟಕ ಸರ್ಕಾರವು ಜನವರಿ 3 ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜನವರಿ 10 ರಿಂದ ಕೊಮೊರ್ಬಿಡಿಟಿ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ‘ಮುನ್ನೆಚ್ಚರಿಕೆ ಡೋಸ್’ (ಬೂಸ್ಟರ್‌ ಡೋಸ್‌) ಅನ್ನು ನೀಡಲು ಪಿಎಚ್‌ಸಿಗಳನ್ನು ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಶುಕ್ರವಾರ ಕೆಲವು ಷರತ್ತುಗಳೊಂದಿಗೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್‌ಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿದೆ. ಭಾರತದ ವಯಸ್ಕ ಜನಸಂಖ್ಯೆಯ ಶೇಕಡಾ 61 ಕ್ಕಿಂತ ಹೆಚ್ಚು ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಅಂತೆಯೇ, ವಯಸ್ಕ ಜನಸಂಖ್ಯೆಯ ಸುಮಾರು 90 ಪ್ರತಿಶತದಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement