ಬೆಳಗಾವಿ : ಡಿಸೆಂಬರ್ 31ರಂದು ನಡೆಯಲಿರುವ ಕರ್ನಾಟಕ ಬಂದ್ ನಡೆಯುವುದು ಶತಸಿದ್ಧ. ಅಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ನಡೆಯಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ದಿನಗಳ ಹಿಂದೆ ನಾವು ಬಂದ್‌ಗೆ ಕರೆ ಕೊಟ್ಟಿದ್ದೇವೆ. ನಮ್ಮ ಹೋರಾಟ ಎಂಇಎಸ್ ಬ್ಯಾನ್ ಮಾಡಲು, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರ ವಿರುದ್ಧ. ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರ ವಿರುದ್ಧ ಇದೆ. ಬೆಳಗಾವಿಯ ಎಲ್ಲ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಕೊಟ್ಟಿದ್ದಾರೆ. ಈಗಾಗಲೇ ಬಂದ್‌ಗೆ ಕರೆ ಕೊಟ್ಟಿದ್ದೇವೆ ಅದರಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಬೆಳಗಾವಿಯಲ್ಲಿದ್ದೇನೆ, ಪ್ರವೀಣ್ ಶೆಟ್ಟಿ ಅವರ ಪತ್ರ ಬಂದಿರುವುದು ಗೊತ್ತಿಲ್ಲ. ಅವರು ಹೇಳಿಕೆ ಕೊಡಲು ಸ್ವತಂತ್ರರು ಎಂದು ಹೇಳಿದರು.
ಎಂಇಎಸ್ ನಿಷೇಧವಾದರೆ ಗಡಿಯಲ್ಲಿ ಪುಂಡಾಟಿಕೆ ನಿಲ್ಲುತ್ತದೆ. ನನ್ನ ಉಸಿರಿರುವವರೆಗೂ ಎಂಇಎಸ್ ನಿಷೇಧ ಮಾಡಬೇಕೆಂದು ಹೋರಾಟ ಮಾಡುತ್ತೇನೆ. 31ರಂದು ಬಂದ್ ಯಾವ ಯಾವ ರೀತಿ ಆಗುತ್ತದೆ ಎನ್ನುವುದು ಕನ್ನಡಿಗರಿಗೆ ಬಿಟ್ಟದ್ದು ಎಂದರು
ನಿಮ್ಮ ಕಾಮೆಂಟ್ ಬರೆಯಿರಿ