ಕೌಶಲ್ಯಭರಿತ ತರಬೇತಿ ಇಂದಿನ ಅಗತ್ಯ:ಡಾ. ಅಜಿತ ಪ್ರಸಾದ

ಧಾರವಾಡ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಳ್ಳೆಯ ಉದ್ಯೋಗ ಅಥವಾ ಸ್ವ ಉದ್ಯೋಗ ಪ್ರಾರಂಭಿಸಬೇಕಾದರೆ ಕೌಶಲ್ಯಭರಿತ ತರಬೇತಿ ಅತಿ ಅವಶ್ಯವಾಗಿದೆ. ಎಲ್ಲ ರಂಗಗಳಲ್ಲೂ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದ್ದು, ತಂತ್ರಜ್ಞಾನ, ಮಾರುಕಟ್ಟೆ ಜ್ಞಾನ, ಸಾಮಾನ್ಯ ಜ್ಞಾನ ಮುಂತಾದವುಗಳ ಬಗ್ಗೆ ಮಾಹಿತಿ ಇದ್ದವರು ಮಾತ್ರ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯ ಎಂದು ಪ್ರಾಚಾರ್ಯರಾದ ಡಾ. ಅಜಿತ್ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಎಂ.ಕಾಂ ವಿಭಾಗ ಹಾಗೂ ಬೆಂಗಳೂರಿನ ಎನ್ ಐ.ಎಸ್.ಎಮ್ ದ ಸಹಯೋಗದಲ್ಲಿ ಎಂ.ಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಕ್ಷೇತ್ರದ ಬಗ್ಗೆ ಜ್ಞಾನವನ್ನು ನೀಡುತ್ತಿದ್ದ ವಿಶ್ವದ ಹಲವಾರು ದೇಶಗಳ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದರೆ ಭಾರತಕ್ಕೆ ಅಂತಹ ಆತಂಕ ಕಾಣಲಿಲ್ಲ. ದೇಶದಲ್ಲಿರುವ ಉಳಿತಾಯ ಮನೋಭಾವನೆ ಇದಕ್ಕೆ ಕಾರಣ. ಷೇರು ಮಾರುಕಟ್ಟೆಯ ಬಗ್ಗೆ ಇಂದಿನ ವಿದ್ಯಾರ್ಥಿಗಳು ಜ್ಞಾನ ಪಡೆಯುವುದು ಅತಿ ಅವಶ್ಯವಾಗಿದೆ. ಈ ರೀತಿಯ ಕೌಶಲ್ಯ ತರಬೇತಿಗಳಿಗೆ ಹಾಜರಾಗುವ ಮೂಲಕ ವಿದ್ಯಾರ್ಥಿಗಳು ಸ್ಟಾಕ್ ಬ್ರೋಕರ್, ಮ್ಯೂಚುಯಲ್ ಫಂಡ್ ವಿತರಕರು, ಹಣಕಾಸು ಸಲಹೆಗಾರರು ಉದ್ಯೋಗ ಪಡೆಯಬಹುದು ಎಂದು ಹೇಳಿದರು
ವಿದ್ಯಾರ್ಥಿಗಳು ನಿಯಮಿತ ಪಠ್ಯದ ಹೊರತಾಗಿ ಪ್ರಾಯೋಗಿಕ ಜ್ಞಾನ ಅಲ್ಪಾವಧಿ ಕೋರ್ಸುಗಳನ್ನು ಅಧ್ಯಯನ ಮಾಡುವುದರಿಂದ ಅವರ ಪದವಿಗೆ ಹೆಚ್ಚಿನ ಮೌಲ್ಯ ಬರುತ್ತದೆ ಆಗ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು ವೃತ್ತಿಜೀವನದಲ್ಲಿ ಪ್ರಾಯೋಗಿಕ ಜ್ಞಾನ ಅತಿ ಅವಶ್ಯ. ಈ ನಿಟ್ಟಿನಲ್ಲಿ ಈ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನದ ಈ ಅವಧಿಯಲ್ಲಿ ಉಳಿತಾಯ, ಸ್ಟಾಕ್ ಮಾರ್ಕೆಟ್, ಮ್ಯೂಚುಯಲ್ ಫಂಡ್ ಇವುಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ನಾಲೆಜ್ ಬೆಲ್ ಕಂಪನಿಯ ಮುಖ್ಯಸ್ಥರಾದ ವಿನೋದ್ ತಂತ್ರಿಯವರು ಹೇಳಿದರು
ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ ಸೂರಜ್ ಜೈನ್, ಚೈತನ್ಯ ಕಿತ್ತೂರ್ ರಜನಿ ತಾಳಿಕೋಟೆ, ಶ್ರೀದೇವಿ ಇನಾಮದಾರ, ಡಾಕ್ಟರ್ ರೋನಿಲ್ ಮನೋಹರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ವೇತಾ ಭಟ್ ಸ್ವಾಗತಿಸಿದರು, ಭಾಗ್ಯಶ್ರೀ ಹೊಸಮನಿ ವಂದಿಸಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement