ಪಾಪ-ಪುಣ್ಯದ ಬಗ್ಗೆ ತಿಳಿದಿರುವವರು ನಾನು ಜಾತಿವಾದಿಯೇ ಎಂದು ಯೋಚಿಸಲಿ ಎಂದು ಹೇಳುತ್ತ ವೇದಿಕೆಯಲ್ಲೇ ಕಣ್ಣೀರಿಟ್ಟ ಸಚಿವ ಮಾಧುಸ್ವಾಮಿ..!

posted in: ರಾಜ್ಯ | 0

ತುಮಕೂರು: ನೀರಾವರಿ ವಿಚಾರದಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ. ನಾನು ಅಂಥ ಕೀಳು ಮಟ್ಟದ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಪಾಪ, ಪುಣ್ಯದ ಬಗ್ಗೆ ತಿಳಿದಿರುವವರು ಯೋಚನೆ ಮಾಡಲಿ” ಎಂದು ಹೇಳುತ್ತ ಸಭೆಯಲ್ಲಿಯೇ ಸಚಿವ ಮಾಧುಸ್ವಾಮಿ ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ತಿಮ್ಲಾಪುರ ಕೆರೆ ತುಂಬಿದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಚಿಕ್ಕನಾಯಕನಹಳ್ಳಿ ತಾಲೂಕಿಗೆ ನೀರಾವರಿ ವಿಚಾರದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಮಾಧುಸ್ವಾಮಿ ಅವರು ಲಿಂಗಾಯತರಿಗೆ ಮಾತ್ರವೇ ಸೀಮಿತವಾಗಿದ್ದಾರೆ ಎಂದು ಹೇಳಿದ್ದಾರೆ. ಈಗ ಆ ಪುಣ್ಯಾತ್ಮರು ಕಾಣುತ್ತಿಲ್ಲ. ಇಂದು ನನ್ನ ಕೆಲಸ ನೋಡಿ ಏನು ಹೇಳುತ್ತಾರೆ ಎಂದು ಭಾವುಕರಾಗಿಯೇ ಪ್ರಶ್ನಿಸಿದ್ದಾರೆ.
ತಿಮ್ಲಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರವೇ ಹಿಂದುಳಿದ ವರ್ಗದವರ ಜಮೀನಿದೆ. ಉಳಿದೆಡೆ ಮೇಲ್ವರ್ಗದವರ ಜಮೀನಿದೆ. ಹಾಗಾಗಿ ಹಿಂದುಳಿದವರಿಗೆ ನೆರವಾಗಲು ತಿಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿಸಲೇಬೇಕು ಎಂದು ಹಠಕ್ಕೆ ಬಿದ್ದು ಅದನ್ನು ಮಾಡಿದ್ದೆ. ಈ ವರ್ಷ ತಿಮ್ಲಾಪುರ ಕೆರೆ ತುಂಬಿಸಿದ್ದೇನೆ. ಪಾಪ, ಪುಣ್ಯ ಗೊತ್ತಿರುವವರು ನಾನು ಜಾತಿವಾದಿಯೇ ಎಂದು ಯೋಚಿಸಲಿ” ಎಂದು ಎಂದು ಹೇಳುತ್ತ ಕಣ್ಣೀರು ಹಾಕಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಬಾಡಿಗೆದಾರರಿಗೂ 200 ಯುನಿಟ್ ವಿದ್ಯುತ್​ ಉಚಿತ: ಗೊಂದಲಕ್ಕೆ ತೆರೆ ಎಳೆದ ಇಂಧನ ಸಚಿವ ಕೆ.ಜೆ. ಜಾರ್ಜ್​

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement